ಚುನಾವಣಾ ಅಖಾಡಕ್ಕಿಳಿಯಲಿದ್ದಾರಾ ಡಿ.ಕೆ. ರವಿ ಅವರ ತಾಯಿ..!
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ. ರವಿ ಅವರ ತಾಯಿ ಗೌರಮ್ಮ ಅವರನ್ನು ಕೋಲಾರದಿಂದ ಕಣಕ್ಕಿಳಿಸಲು ಯೋಜಿಸಲಾಗಿದೆ. ಇಂತಹುದೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ದಕ್ಷ ಜಿಲ್ಲಾಧಿಕಾರಿ ಎಂದು ಹೆಸರಾಗಿದ್ದ ಡಿ.ಕೆ. ರವಿ ಅವರ ಸಾವಿನ ನ್ಯಾಯಕ್ಕಾಗಿ ಹೋರಾಟ ನಡೆಸಲು ಅಭಿಮಾನಿಗಳು, ಬೆಂಬಲಿಗರು ಮುಂದಾಗಿದ್ದಾರೆ. ಡಿ.ಕೆ. ರವಿ ಅವರ ಸಾವಿನ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಹೋರಾಟ ನಡೆಸಬೇಕಿದೆ ಎಂಬುದು ಅವರ ಬೆಂಬಲಿಗರ ಅನಿಸಿಕೆಯಾಗಿದೆ. ಕಾಂಗ್ರೆಸ್ ಸರ್ಕಾರ ರವಿ ಅವರ ಸಾವಿನ ಕುರಿತಾಗಿ ಸರಿಯಾಗಿ ಸ್ಪಂದಿಸಿಲ್ಲ. ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಯೋಜಿಸಲಾಗಿದೆ. ಕೋಲಾರದಲ್ಲಿ ಡಿ.ಕೆ. ರವಿ ಕೆಲಸ ಮಾಡಿದ್ದು, ಜನಾನುರಾಗಿಯಾಗಿದ್ದರು. ಕೋಲಾರದಿಂದಲೇ ಗೌರಮ್ಮ ಅವರನ್ನು ಕಣಕ್ಕಿಳಿಸಲು ರವಿ ಅವರ ಬೆಂಬಲಿಗರು, ಅಭಿಮಾನಿಗಳು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
Comments