ಟಿಪ್ಪು ಜಯಂತಿ ಪೋಸ್ಟರ್ ನಲ್ಲಿ ಬಿಜೆಪಿ ಶಾಸಕ, ಬಿಜೆಪಿ ನಾಯಕರಿಗೆ ಮುಜುಗರ
ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಪ್ಪು ಜಯಂತಿ ಪೋಸ್ಟರ್ ಹಾಗೂ ಬ್ಯಾನರ್ ನಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ರಾರಾಜಿಸುತ್ತಿರುವುದು ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿದೆ.
ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಪ್ಪು ಜಯಂತಿ ಪೋಸ್ಟರ್ ಹಾಗೂ ಬ್ಯಾನರ್ ನಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ರಾರಾಜಿಸುತ್ತಿರುವುದು ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿದೆ. ರಾಜ್ಯದ ಎಲ್ಲಾ ಕಡೆ ಟಿಪ್ಪು ಜಯಂತಿ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸತೀಶ್ ರೆಡ್ಡಿ. ತಮಗೂ ಆ ಬ್ಯಾನರ್ ಗಳಿಗೂ ಸಂಬಂಧವಿಲ್ಲ, ಫೋಟೋ ಹಾಕುವ ಮುನ್ನ ನನ್ನ ಅನುಮತಿ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬೊಮ್ಮನಹಳ್ಳಿ ಟಿಪ್ಪು ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸತೀಶ್ ರೆಡ್ಡಿ ಬೆಂಬಲಿಗರು ಹಾಕಿದ ಪೋಸ್ಟರ್ ನಲ್ಲಿ ಸತೀಶ್ ಅವರ ಚಿತ್ರವಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ತಮ್ಮ ಬೆಂಬಲಿಗರು ನನ್ನ ಫೋಟೋ ಹಾಕಿರಬಹುದು, ಆದ್ರೆ ಪಕ್ಷದ ನಿಲುವಿಗೆ ನಾನು ಬದ್ಧ ಎಂದು ಹೇಳುವ ಮೂಲಕ ರೆಡ್ಡಿ ವಿವಾದಕ್ಕೆ ತೆರೆ ಎಳೆದರು.
Comments