'ಬ್ಲೂ ಫಿಲಂ ಅಂದ್ರೆ ಗೊತ್ತಾ' ವಿವರ ನೀಡಿ ಜನರನ್ನು ನಗೆ ಗಡಲಲ್ಲಿ ತೇಲಿಸಿದ ಸಿಎಂ!

ರಾಜ್ಯದಲ್ಲಿ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ, ಅಮಿತಾ ಶಾ ಮಂತ್ರದಂಡ ನಡೆಯುವುದಿಲ್ಲ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿರುವ ಅವರು ಸಿಎಂ, ಬಿಜೆಪಿಯವರು ಲೂಟಿ ಮಾಡಿ ಮೊಸಳೆ ಕಣ್ಣೀರು ಸುರಿಸುತ್ತಾರೆ.
ಬೆಂಗಳೂರು: ರಾಜ್ಯದಲ್ಲಿ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ, ಅಮಿತಾ ಶಾ ಮಂತ್ರದಂಡ ನಡೆಯುವುದಿಲ್ಲ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿರುವ ಅವರು ಸಿಎಂ, ಬಿಜೆಪಿಯವರು ಲೂಟಿ ಮಾಡಿ ಮೊಸಳೆ ಕಣ್ಣೀರು ಸುರಿಸುತ್ತಾರೆ. ಯಡಿಯೂರಪ್ಪಾ , ಅಮಿತ್ ಶಾ , ಜೈಲಿಗೆ ಹೋಗಿ ಬಂದದ್ದನ್ನು ಜನ ಇನ್ನು ಮರೆತಿಲ್ಲ, ನಮ್ಮದು ಭ್ರಷ್ಟಾಚಾರ ಆರೋಪಗಳನ್ನು ಬಿಜೆಪಿ ನಾಯಕರು ತಾಕತ್ತಿದ್ದರೆ ಸಾಬೀತು ಮಾಡಲಿ, ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಿಎಂ ಸವಾಲು ಹಾಕಿದರು.
ಬಿ.ಎಸ್ ಯಡಿಯಬರಪ್ಪಾನವರಿಗೆ ವಯಸ್ಸಾಗಿದೆ. ಅವರಿಗೆ ಅರಳು-ಮರಳು ನನ್ನ ವಿರುದ್ಧ ಮನಸ್ಸಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ವಾಡಿದರು. ಬೆಂಗಳೂರು ನಗರಾಭಿವೃದ್ಧಿಗೆ 7000 ಕೋಟಿ ರೂ. ನೀಡಿದ್ದೇವೆ. ಬಿಜೆಪಿಯವರು 3000 ಕೋಟಿ ರೂ. ಬಿಲ್ ಬಾಕಿ ಉಳಿಸಿದ್ದರು. ನಾವು ಅದನ್ನು ಖರೀದಿಸಿದ್ದೇವೆ ಎಂದು ತಿಳಿಸಿದರು,
ಇನ್ನು ಬಿಜೆಪಿಯವರು ಬೆಣ್ಣೆಯಲ್ಲಿ ಕುದಲೂ ತೆಗೆದಂತೆ ಮಾತನಾಡುತ್ತಾರೆ.ಅವರು ಲಜ್ಜೆಗೆಟ್ಟವರು, ಭ್ರಷ್ಟರು. ಕೆಲವರು ಬ್ಲೂ ಫಿಲ್ಮಂ ನೋಡಿ ಅಧಿಕಾರ ಕಳೆದುಕೊಂಡರು, ಬ್ಲೂ ಫಿಲಂ ಅಂದ್ರೆ ಗೊತ್ತಾ , ನೀಲಿ ಚಿತ್ರ ಎಂದು ವಿವರ ನೀಡಿ ಜನರನ್ನು ನಗೆ ಗಡಲಲ್ಲಿ ತೇಲಿಸಿದರು ಸಿಎಂ ಸಿದ್ದರಾಮಯ್ಯ.
Comments