ನರೇಂದ್ರ ಮೋದಿಯವರನ್ನು ಆಕ್ಷೇಪಿಸಿದ ಡಿ.ವಿ.ಸದಾನಂದ ಗೌಡ
ಬಂಟ್ವಾಳದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸದಾನಂದ ಗೌಡ ಅವರು, ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರವು ಸಾವಿರಾರು ಕೋಟಿ ಅನುದಾನ ನೀಡಿದೆ. ನರೇಂದ್ರ ಮೋದಿ ಅವರಿಗೆ ನಾಚಿಕೆಯಾಗಬೇಕು. ಕೇಂದ್ರ ಸರ್ಕಾರವನ್ನು ದೂಷಿಸಲು ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರಿಗೆ ನಾಲಗೆ ಮೇಲೆ ಹಿಡಿತ ತಪ್ಪಿದಂತೆ ಕಾಣುತ್ತಿದ್ದು, ನಿನ್ನೆ ಸುಳ್ಯದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಭೆಯಲ್ಲಿ ತನ್ನದೇ ಪಕ್ಷದವನ್ನು ಹಂತಕರು ಎಂದು ಸಂಸದ ಶ್ರೀರಾಮುಲು ಹೇಳಿದ ಬಳಿಕ ಶನಿವಾರ ಬಂಟ್ವಾಳದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಬೈದಿದ್ದಾರೆ. ಬಿಜೆಪಿ ನಾಯಕರ ಎಲುಬಿಲ್ಲದ ನಾಲಗೆಯು ಅಡ್ಡದಿಡ್ಡಿಯಾಗಿ ಹೋಗುತ್ತಿರುವುದನ್ನು ಕಾರ್ಯಕರ್ತರಿಗೆ ಸಹಿಸಲಾಗುತ್ತಿಲ್ಲ. ಸಭೆಯಲ್ಲಿದ್ದ ಕಾರ್ಯಕರ್ತರು ಈ ವಿಚಾರದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸುಳ್ಯದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಭೆಯಲ್ಲಿ ಹಿಂದೂಗಳನ್ನು ಕೊಂದಿರುವುದು ಬೇರೆ ಯಾರು ಅಲ್ಲ, ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಎಂದು ಶ್ರೀರಾಮುಲು ತನ್ನ ಭಾಷಣ ಮಧ್ಯೆ ಹೇಳಿದ್ದರು.
Comments