ಸಿಎಂ ಸಿದ್ದರಾಮಯ್ಯ ದಿ ಬೆಸ್ಟ್ ಸಿಎಂ ಎಂದು ಹಾಡಿ ಹೊಗಳಿದ ಎಂ.ಕೃಷ್ಣಪ್ಪ

11 Nov 2017 3:54 PM | Politics
292 Report

ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಕೃಷ್ಣಪ್ಪ ಅನ್ನಭಾಗ್ಯ ಯೋಜನೆ ಸೇರಿದಂತೆ ಹಲವು ಯಶಸ್ವಿ ಯೋಜನೆಗಳನ್ನು ಎಲ್ಲಾ ವರ್ಗದ ಜನರಿಗೆ ಸಿಗುವಂತೆ ಮಾಡಿದ್ದಾರೆ ಎಂದು ಹಾಡಿ ಹೊಗಳಿದರು.

444 ಸ್ಲಂ ನವರಿಗೆ ಕ್ರಯಪತ್ರ ನೀಡಲಾಗಿದೆ. ಸ್ಲಂಗಳಲ್ಲಿ ಮನೆ ಕಟ್ಟುವವರಿಗೆ 8 ಕೋಟಿ ಸಾಲ ನೀಡಲಾಗಿದೆ. ಕಾರ್ಡ್ ರಸ್ತೆಯಲ್ಲಿನ ತರಕಾರಿ ಮಳಿಗೆಗಳನ್ನು ತೆರವುಗೊಳಿಸಿ ಅಂಡರ್‍ಪಾಸ್ ಸೆಲ್ಲರ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. 49 ಸಾವಿರ ಪಡಿತರ ಕಾರ್ಡ್ ವಿತರಣೆ ಮಾಡಲಾಗಿದ್ದು, 15 ಸಾವಿರ ಕಾರ್ಡ್‍ಗಳು ಬಾಕಿ ಇವೆ. ತಕ್ಷಣದಲ್ಲೇ ಅದನ್ನು ಮಾಡಲಾಗುವುದು. 4480 ಮನೆ ವಿತರಣೆ ಮಾಡಲು ಎರಡೂ ಕ್ಷೇತ್ರಗಳಿಗೆ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

ವಸತಿ ಇಲಾಖೆ ವತಿಯಿಂದ ಇದುವರೆಗೆ ಬಡವರಿಗೆ 13 ಲಕ್ಷ ಮನೆಗಳನ್ನು ನಿರ್ಮಿಸಿದ್ದು, ಇನ್ನೂ 3ಲಕ್ಷ ಹೆಚ್ಚುವರಿ ಮನೆಗಳನ್ನು ನಿರ್ಮಿಸುವ ಉದ್ದೇಶ ಹೊಂದಿದ್ದೇವೆ ಎಂದರು. ಶಾಸಕ ಪ್ರಿಯಾಕೃಷ್ಣ ಮಾತನಾಡಿ, ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ತಿಳಿಸಲು ಆಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆಯಪ್ ಪ್ಲೇಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಈ ಮೂಲಕ ಕ್ಷೇತ್ರದಲ್ಲಿನ ಸಮಸ್ಯೆ ಬಗೆಹರಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು. ಮೇಯರ್ ಸಂಪತ್‍ರಾಜ್ ಮಾತನಾಡಿ, ನಮ್ಮ ಮುಖ್ಯಮಂತ್ರಿಗಳು ಸಚಿನ್ ತೆಂಡೂಲ್ಕರ್ ಇದ್ದಂತೆ. ಅವರು ಸಚಿನ್ ನಿರ್ಮಿಸಿರುವ ದಾಖಲೆಗಳ ನೆನಪು ಅವರಿಗೇ ಉಳಿದಿಲ್ಲ. ಅದೇ ರೀತಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಜನಪರ 

Edited By

venki swamy

Reported By

Madhu shree

Comments