ಟಿಪ್ಪುಗೆ ನಮನ ಸಲ್ಲಿಸು ಎಂದಿದ್ದಕ್ಕೆ ಕೈ ಕಚ್ಚಿ ರಕ್ತಗೊಳಿಸಿದ ಕಾರ್ಯಕರ್ತ

ಬೆಂಗಳೂರು : ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಬೇಕು ಅಥವಾ ಬೇಡ ಎಂಬುದಕ್ಕೆ ಹಲವಾರು ಚರ್ಚೆಗಳು ನಡೆಯುತ್ತಿವೆ. ಕೆಲವರು ಪರ ಹಾಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಬೇಕು ಅಥವಾ ಬೇಡ ಎಂಬುದಕ್ಕೆ ಹಲವಾರು ಚರ್ಚೆಗಳು ನಡೆಯುತ್ತಿವೆ. ಕೆಲವರು ಪರ ಹಾಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಕಾರ್ಯಕರ್ತ ನಮನ ಸಲ್ಲಿಸು ಎಂದಿದ್ದಕ್ಕೆ ಕೈ ಕಚ್ಚಿದ ಘಟನೆ ವರದಿಯಾಗಿದೆ. ಭಾವಚಿತ್ರಕ್ಕೆ ನಮನ ಸಲ್ಲಿಸು ಎಂದು ಹೇಳಿದ್ದೇ ತಪ್ಪಾಯ್ತು ಎನ್ನುವಷ್ಟರ ಮಟ್ಟಿಗೆ ಕೈ ಕಾರ್ಯಕರ್ತನೊಬ್ಬ ಪ್ರಧಾನ ಕಾರ್ಯದರ್ಶಿಯ ಕೈಯನ್ನು ಕಚ್ಚಿದ್ದಾನೆ. ಅದು ರಕ್ತ ಬರುವಷ್ಟರ ಮಟ್ಟಿಗೆ. ಈ ಘಟನೆ ಜೆಡಿಯು ಕಚೇರಿಯಲ್ಲಿ ವರದಿಯಾಗಿದೆ.
ಗಾಯಗೊಂಡಿರುವ ಪ್ರಧಾನ ಕಾರ್ಯದರ್ಶಿ ನಾಗೇಶ್ ಅವರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಟಿಪ್ಪು ಜಯಂತಿ ಆಚರಣೆ ಬಗ್ಗೆ ನಡೆದ ಜಟಾಪಟಿ ಬೆಂಗಳೂರಿನ ಕುಮಾರಪಾರ್ಕ್ ನಲ್ಲಿರೋ ಕಚೇರಿಗೂ ವಿಸ್ತರಿಸಿತ್ತು. ಟಿಪ್ಪು ಭಾವಚಿತ್ರಕ್ಕೆ ನಮನ ಸಲ್ಲಿಸಲು ಹೇಳಿದ ಕೂಡಲೇ ಕೋಪಗೊಂಡ ಜೆಡಿಯು ಕಾರ್ಯಕರ್ತ ಗೋವಿಂದ್ ರಾಜು ಪ್ರಧಾನ ಕಾರ್ಯದರ್ಶಿ ನಾಗೇಶ್ ಎಂಬಾತರ ಕೈ ಬೆರಳು ಕಚ್ಚಿ ಬಿಟ್ಟಿದ್ದಾರೆ.
Comments