ಟಿಪ್ಪು ಬಗ್ಗೆ ಪ್ರತಾಪ್ ಸಿಂಹ ಟ್ವಿಟರ್ ನಲ್ಲಿ ಹೇಳಿರುವುದಾದರೂ ಏನು ?
ಟಿಪ್ಪುವನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿ ನಂತರ ಹಿಂದೂ ಧರ್ಮದ ಪ್ರಕಾರ ಆರಾಧನೆ ಮಾಡಲಾಗಿದೆ ಎಂಬ ಅರ್ಥ ಬರುವ ರೀತಿಯಲ್ಲಿ ಪ್ರತಾಪ್ ಸಿಂಹ ಮತಾಂತರ ಹಾಗೂ ಆರಾಧನೆ ಎಂಬ ಬರಹದಡಿ ಟಿಪ್ಪು ಜಯಂತಿಯ ಪೋಟೋ ಹಾಕಿ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಎಸಿ ಕೋರ್ಟ್ ನಲ್ಲಿ ಟಿಪ್ಪುವಿನ ಮತಾಂತರ ಮತ್ತು ಆರಾಧನೆ ಎಂಬ ಶೀರ್ಷಿಕೆಯಡಿ ಟಿಪ್ಪು ಜಯಂತಿಯ 2 ಫೋಟೋಗಳನ್ನು ಸಂಸದ ಪ್ರತಾಪ್ ಸಿಂಹ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು ಈಗ ಹಲವಾರು ಅರ್ಥಗಳಿಗೆ ಕಾರಣವಾಗಿದೆ. ಟಿಪ್ಪು ಜಯಂತಿ ಆಚರಿಸುವಾಗ ಟಿಪ್ಪು ಫೋಟೋಗೆ ಹೂವಿನ ಹಾರ ಹಾಕಿ ಹಣ್ಣು, ಕುಂಕುಮ, ಅರಿಶಿನವನ್ನು ಟಿಪ್ಪು ಪೋಟೋದ ಮುಂದೆ ಇಟ್ಟು ಮೊದಲು ಟಿಪ್ಪುವನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿ ನಂತರ ಹಿಂದೂ ಧರ್ಮದ ಪ್ರಕಾರ ಆರಾಧನೆ ಮಾಡಲಾಗಿದೆ ಎಂಬ ಅರ್ಥ ಬರುವ ರೀತಿಯಲ್ಲಿ ಪ್ರತಾಪ್ ಸಿಂಹ ಮತಾಂತರ ಹಾಗೂ ಆರಾಧನೆ ಎಂಬ ಬರಹದಡಿ ಟಿಪ್ಪು ಜಯಂತಿಯ ಪೋಟೋ ಹಾಕಿ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
Comments