ಜಿಎಸ್‍ಟಿ ಎಫೆಕ್ಟ್ : ಚಿನ್ನ ಖರೀದಿ ಮೇಲೆ ಪರಿಣಾಮ
ವಿಶ್ವ ಚಿನ್ನ ಮಂಡಳಿ (ಡಬ್ಲ್ಯುಜಿಸಿ) ವರದಿ ಪ್ರಕಾರ ಭಾರತದಲ್ಲಿ ಈ ವರ್ಷ ತೃತೀಯ ಚತುರ್ಮಾಸ ಅವಧಿಯಲ್ಲಿ ಹಳದಿ ಲೋಹದ ಬೇಡಿಕೆಯು 145.9 ಟನ್‍ಗಳಿಗೆ (ಶೇ.24ರಷ್ಟು) ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶದ ಬಂಗಾರ ಬೇಡಿಕೆ 193 ಟನ್ನುಗಳಷ್ಟಿತ್ತು.
ಇದನ್ನು ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ, ಚಿನ್ನದ ಬೇಡಿಕೆಯು 38,540 ಕೋಟಿ ರೂ.ಗಳಿಗೆ ಇಳಿದಿದೆ (ಶೇ.30ರಷ್ಟು ಕಡಿಮೆಯಾಗಿದೆ). ಕಳೆದ ವರ್ಷ ಇದು 55,390 ಕೋಟಿ ರೂ.ಗಳಷ್ಟು ದಾಖಲಾಗಿತ್ತು ಎಂದು ಡಬ್ಲ್ಯುಜಿಸಿಯ ಜಾಗತಿಕ ಚಿನ್ನ ಬೇಡಿಕೆ (ತ್ರೈಮಾಸಿಕ-3, 2017) ವರದಿಯಲ್ಲಿ ವಿವರಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 26.7 ಟನ್‍ಗಳಷ್ಟು ಬಂಗಾರವನ್ನು ಪುನರ್ಬಳಕೆ ಮಾಡಲಾಗಿದೆ. ಜಾಗತಿಕ ಚಿನ್ನ ಬೇಡಿಕೆಯಲ್ಲಿಯೂ ಕುಸಿತ ಕಂಡುಬಂದಿದೆ. ಮೂರನೇ ಚತುರ್ಮಾಸ ಅವಧಿಯಲ್ಲಿ ಅಮೂಲ್ಯ ಲೋಹದ ವಹಿವಾಟು ಶೇ.9 ರಿಂದ 915 ಟನ್‍ಗಳಿಗೆ ಇಳಿದಿದೆ.
Comments