ಸೊಗಡು ಶಿವಣ್ಣಗೆ ಟಿಕೆಟ್ ಕಟ್ ಮಾಡಿದ ಬಿಎಸ್‍ವೈ
ಮುಂದಿನ ವಿಧಾನಸಭೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ರಾಜ್ಯಾದ್ಯಂತ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿದೆ. ಈ ಯಾತ್ರೆ ಮೊನ್ನೆ ತುಮಕೂರಿಗೆ ಹೋಗಿತ್ತು. ಇದರಲ್ಲಿ ಸೊಗಡು ಶಿವಣ್ಣ ಪಾಲ್ಗೊಂಡಿರಲಿಲ್ಲ. ಇದರಿಂದ ಯಡಿಯೂರಪ್ಪ ಅವರ ಕಣ್ಣು ಮತ್ತಷ್ಟು ಕೆಂಪಾಗುವಂತೆ ಮಾಡಿತ್ತು.
ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಜಯಗಳಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ 2018ರ ವಿಧಾನಸಭೆ ಟಿಕೆಟ್ ಕೈ ತಪ್ಪಲಿದೆ. ಶಿವಣ್ಣ ಬದಲಿಗೆ ತುಮಕೂರು ಬಿಜೆಪಿಯ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಹೆಸರನ್ನು ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇದರಿಂದ ಶಿವಣ್ಣಗೆ ಭಾರೀ ಹಿನ್ನಡೆಯಾಗಿದೆ. ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಇತರೆ ನಾಯಕರುಗಳ ಸಲಹೆ, ಅಭಿಪ್ರಾಯಗಳನ್ನು ಕೇಳದೆ ಯಡಿಯೂರಪ್ಪ ಅವರು ಸ್ವನಿರ್ಧಾರ ತೆಗೆದುಕೊಂಡಿದ್ದರಿಂದ ಕೆಲ ಬಿಜೆಪಿ ನಾಯಕರು ಮುನಿಸಿಕೊಂಡಿದ್ದರು. ಇದರಲ್ಲಿ ಶಿವಣ್ಣ ಕೂಡ ಇದ್ದರು. ಇದರಿಂದ ಬಿಎಸ್‍ವೈ ಹಾಗೂ ಶಿವಣ್ಣನ ನಡುವೆ ಶೀತಲ ಸಮರ ನಡೆದಿತ್ತು.
Comments