ಮಾತುಗಳ ಮೇಲೆ ಹಿಡಿತವಿರಲಿ ಸಿದ್ದರಾಮಯ್ಯ ಗೆ ವಾರ್ನಿಂಗ್ ನೀಡಿದ ಎಚ್ ಡಿಡಿ
ಸಿಎಂ ಮಾತಿನಿಂದ ವಿಚಲಿತರಾಗಿರುವಂತೆ ಕಂಡ ದೇವೇಗೌಡರು ಸಿದ್ದರಾಮಯ್ಯ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮನ್ನು, ಯಡಿಯೂರಪ್ಪನವರನ್ನು ಈವರೆಗೂ ಗೌರವದಿಂದಲೇ ಕಂಡಿದ್ದೇನೆ ಎಂದೂ ಲಘುವಾಗಿ ಮಾತನಾಡಿಲ್ಲ. ನನ್ನನ್ನು ಕೆಣಕಬೇಡಿ. ಮಾತುಗಳ ಮೇಲೆ ಹಿಡಿತವಿರಲಿ ಎಂದು ದೇವೇಗೌಡ ವಾರ್ನಿಂಗ್ ನೀಡಿದ್ದಾರೆ.
ನಾನು ಇಲ್ಲಿಯವರೆಗೂ ತಡೆದಿದ್ದೇನೆ. ಈಗ ನಿಮ್ಮ ವ್ಯಂಗ್ಯದ ಮಾತುಗಳನ್ನು ಕೇಳಲು ಹೇಸಿಗೆಯಾಗುತ್ತದೆ ಎಂದು ದೇವೇಗೌಡ ಕಿಡಿ ಕಾರಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರಂಭಿಸಿರುವ "ಕರ್ನಾಟಕ ವಿಕಾಸ ವಾಹಿನಿ' ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕೆಂಡಾಮಂಡಲವಾಗಿದ್ದಾರೆ. ಅರಸೀಕೆರೆಯಲ್ಲಿ ವಾಲ್ಮೀಕಿ ಭವನ ಉದ್ಘಾಟಿಸಿ ಮಾತನಾಡಿದ ಅವರು, ದೇವೇಗೌಡರು ಒಂದೂವರೆ ವರ್ಷ, ಕುಮಾರಸ್ವಾಮಿ 20 ತಿಂಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಲಿಲ್ಲವಾ? ಹೃದಯದ ಶಸ್ತ್ರಚಿಕಿತ್ಸೆಯಾಗಿ ಒಂದು ತಿಂಗಳಾಗಿದೆ. ಅಂತಹ ಕುಮಾರಸ್ವಾಮಿಯವರ ಬಗ್ಗೆ ಮಾತನಾಡಲು ಕನಿಷ್ಠ ಸೌಜನ್ಯ ಬೇಡವಾ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
Comments