ಕಾಂಗ್ರೆಸ್ ಪಕ್ಷ ದ ಭವಿಷ್ಯ ನುಡಿದ ಮಾಜಿ ಪ್ರಧಾನಿ ದೇವೇಗೌಡರು
ಅರಸೀಕೆರೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಯಾರಿಗೆ ಏನನ್ನು ನೀಡುತ್ತಿದೆ. ರೈತರ ಸ್ಥಿತಿ ಹೇಗಿದೆ, ಮೆಕ್ಕೆ ಜೋಳ ಸೇರಿದಂತೆ ಬೆಳೆ, ತೆಂಗು ಸರ್ವನಾಶವಾಗಿವೆ. ಇದಕ್ಕೆ ಯಾವ ಪರಿಹಾರ ನೀಡಲಾಗಿದೆ ಎಂದು ಪ್ರಶ್ನಿಸಿದರು. ಅಲ್ಲದೆ ಸರ್ಕಾರದ ಲೂಟಿ ಬಗ್ಗೆ ರಾಜ್ಯದ ಜನರಿಗೆ ತಿಳಿದಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರನ್ನು ಮನೆಗೆ ಕಳುಹಿಸಲಿದ್ದಾರೆ ಎಂದು ದೇವೇಗೌಡರು ಭವಿಷ್ಯ ನುಡಿದರು.
ದಿನಕ್ಕೆರಡು ಭಾಗ್ಯ, ಸುಳ್ಳಿನ ಪ್ರಚಾರ, ರೈತರ ಜೀವನ ಮೂರಾಬಟ್ಟೆ, ಬರದ ಛಾಯೆ. ಹೀಗೆ ಭಾಗ್ಯಗಳ ಹೆಸರಲ್ಲಿ ರಾಜ್ಯವನ್ನು ಲೂಟಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ಹೆಚ್. ಡಿ. ದೇವೇಗೌಡ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ವಿಕಾಸ ಯಾತ್ರೆಗೆ ರಾಜ್ಯದಲ್ಲಿ ಅಭೂತಪೂರ್ವ ಸ್ವಾಗತ ದೊರೆಯುತ್ತಿದೆ. ರೈತರು, ಜನಸಾಮಾನ್ಯರು ಕುಮಾರಸ್ವಾಮಿ ಪರವಾಗಿ ನಿಲ್ಲುತ್ತಿದ್ದಾರೆ. ಅವರು ಎಂದೂ ಜಾತಿಯ ಹೆಸರಲ್ಲಿ ಮತವನ್ನು ಬೇಡಿಲ್ಲ. ಬೆಂಗಳೂರಿನ ಅಭಿವೃದ್ಧಿಗಾಗಿ ಯಾರು ಶ್ರಮಿಸಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ವಿಕಾಸ ಯಾತ್ರೆಯ ರಸ್ತೆ ಉದ್ದಗಲಕ್ಕೂ ರಾತ್ರಿಯಾದರೂ ಜನ ಸ್ವಾಗತಿಸಲು ನಿಲ್ಲುತ್ತಾರೆ. ಇಂತಹ ಒಂದು ಯಾತ್ರೆಯನ್ನ ಮಾಡಿದರೆ ಕಾಂಗ್ರೆಸ್‌ನವರಿಗೆ ತಿಳಿಯಲಿದೆ ಎಂದರು.ರಾಜ್ಯದಲ್ಲಿ ಜೆಡಿಎಸ್ ಪಕ್ಷ ಆಡಳಿತಕ್ಕೆ ಬಂದರೆ ಕುಮಾರಸ್ವಾಮಿಯವರು ಹೆಚ್ಚಿನ ಗಮನ ಹರಿಸಲಿದ್ದಾರೆ. ಇದಕ್ಕೆ ನೌಕರರ ಸಂಘದ ಅಧ್ಯಕ್ಷ ಹಾಸನದವರೇ ಆಗಿರುವುದು. ಈಗ ಅವರು ಎತ್ತರಕ್ಕೆ ಬೆಳೆಯಲು ಕಾರಣ ಯಾರು ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯದಲ್ಲಿ ಬರಗಾಲ ಬಂದು ತತ್ತರಿಸುತ್ತಿದ್ದರೂ ಕೃಷ್ಣ ನದಿಯ ನೀರನ್ನು ಬಳಕೆ ಮಾಡಲು ತಿಳಿಯದ ಸರ್ಕಾರ, ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಇದು ನಾಚಿಗೇಡಿನ ಸರ್ಕಾರ. ಇವರು ರೈತರಿಗಾಗಿ ನೀಡಿದ್ದಾರರೂ ಏನು ಎಂದು ಪ್ರಶ್ನಿಸಿದರು.ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ರಾಜ್ಯದ ಜನತೆ ಕಾಣಲಿದ್ದು, ಜೆಡಿಎಸ್ ಪಕ್ಷ ಪೂರ್ಣ ಪ್ರಮಾಣದ ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ. ನೋಟ್ ಬ್ಯಾನ್‍ಗೆ ಜನರೇ ಉತ್ತರಿಸುತ್ತಾರೆ. ದೇಶದಲ್ಲಿ ನೋಟ್ ಬ್ಯಾನ್‌ನಿಂದ ಜನರು ಸಮಸ್ಯೆಯನ್ನು ಅನುಭವಿಸಿರುವುದು ಎಲ್ಲರಿಗೂ ತಿಳಿದ ವಿಚಾರವೇ, ಇದಕ್ಕೆ ಜನರೇ ಉತ್ತರಿಸುತ್ತಾರೆ ಎಂದರು.ಮುಂದಿನ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಹಾಲಿ ಶಾಸಕರಾಗಿರುವವರಿಗೆ ಟಿಕೆಟ್ ನೀಡಲಾಗುವುದು. ಉಳಿದಂತೆ ಒಂದೆರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಸ್ಥಳೀಯ ನಾಯಕರುಗಳ ತೀರ್ಮಾನದಂತೆ ನಡೆಸಲಾಗುವುದು ಎಂದು ತಿಳಿಸಿದರು.
Comments