ಸ್ವತಂತ್ರ ಧರ್ಮ ಸ್ಥಾಪನೆ ಕುರಿತ ಮಾಡಲಾದ ಪ್ರಶ್ನೆಗೆ ಗಲಿಬಿಲಿಗೊಂಡ ಸಿಎಂ

ಬೆಂಗಳೂರು: ಲಿಂಗಾಯತ ಧರ್ಮ ಸ್ಥಾಪನೆಗೆ ಸಂಬಂಧಪಟ್ಟಂತೆ ಕೇಳಲಾದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಕೋಪಗೊಂಡ ಘಟನೆ ವರದಿಯಾಗಿದೆ.
ಬೆಂಗಳೂರು: ಲಿಂಗಾಯತ ಧರ್ಮ ಸ್ಥಾಪನೆಗೆ ಸಂಬಂಧಪಟ್ಟಂತೆ ಕೇಳಲಾದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಕೋಪಗೊಂಡ ಘಟನೆ ವರದಿಯಾಗಿದೆ. ಸದಾ ಸಮಾಧಾನದಿಂದ ಉತ್ತರ ನೀಡುತ್ತಿದ್ದ ಸಿಎಂ ಸಿದ್ದರಾಮಯ್ಯನವರು, ಈ ಬಾರಿ ಕೇಳಲಾದ ಪ್ರಶ್ನೆಗೆ ಗಲಿಬಿಲಿಗೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಅವರು, ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಸ್ಥಾಪನೆಗೆ ಹೋಗುವುದಿಲ್ಲ ಎಂದು ಹೇಳಿದರು. ಹಾಗೇ ಸ್ವತಂತ್ರ ಧರ್ಮ ಸ್ಥಾಪನೆಗೆ ಸಂವಿಧಾನದಲ್ಲಿ ಅವಕಾಶ ಇದೆಯಾ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಗಲಿಬಿಲಿಗೊಂಡರು. ಸಂವಿಧಾನದ ಆಸ್ಪೆಕ್ಟ್ ಗಳನ್ನೆಲ್ಲಾ ಹೇಳಲು ಕೂತುಕೊಳ್ಳಕಾಗುತ್ತಾ, ಶಿಫಾರಸು ಮಾಡಬೇಕಾದರೆ ಸಂವಿಧಾನದ ಅಂಶಗಳನ್ನು ನೋಡಲೇಬೇಕಲ್ಲ ಎಂದು ಮಾಧ್ಯಮದವರ ಪೂರಕ ಪ್ರಶ್ನೆಗೆ, ನೀನು ಆಮೇಲೆ ಬಾ ಕಾನೂನಿನ ಅಂಶಗಳನ್ನು ಹೇಳಿ ಕೋಡ್ತಿವಿ ಎಂದು ತುಸು ಕೋಪಗೊಂಡು ಉತ್ತರ ಹೇಳದೇ ನುಣುಚಿಗೊಂಡರು.. ಲಿಂಗಾಯತ ಧರ್ಮ ಸ್ಫಾಪನೆಯ ಸಂಬಂಧ ಶಿಪಾರಸು ಹಂತಕ್ಕೆ ಇನ್ನು ಬಂದಿಲ್ಲ. ಈ ಗೊಂದಲಗಳಿಗೆ ನಾನು ಹೋಗ್ಲ ಎಂದರು.
Comments