ಕುಮಾರಸ್ವಾಮಿ ಹಾಸಿಗೆ ,ದಿಂಬಿನ ಬಗ್ಗೆ ರಹಸ್ಯ ಹೇಳಿದ ಸಿಎಂ?

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಬಿರುಸಿನ ನಡೆಸಲು ಜೆಡಿಎಸ್ ಕುಮಾರಪರ್ವ ಯಾತ್ರೆಗೆ ಇವತ್ತು ನೀಡಲಾಯ್ತು. ಜೆಡಿಎಸ್ ಹಮ್ಮಿಕೊಂಡಿರುವ ಯಾತ್ರೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕರ್ನಾಟಕ ವಿಕಾಸ ವಾಹಿನಿ ಪಕ್ಷ ಅಧಿಕಾರಕ್ಕೆ ಬಂದರೆ ಈಡೇರಿಸುವ ಭರವಸೆಗಳನ್ನೊಳಗೊಂಡ ವಾಕ್ಯಗಳೊಂದಿಗೆ ರಾರಾಜಿಸುತ್ತಿವೆ.
ಈ ಮಧ್ಯೆ ವಿಪಕ್ಷಗಳು ಕುಮಾರಪರ್ವ ಯಾತ್ರೆ ಕುರಿತು ಹಲವು ಟೀಕೆ, ಆಕ್ಷೇಪಣೆಗಳನ್ನು ಮಾಡುತ್ತಿವೆ. ಇವತ್ತು ಸಿಎಂ ಸಿದ್ದರಾಮಯ್ಯ ಕುಮಾರಪರ್ವ ಯಾತ್ರೆ ಕುರಿತು ವ್ಯಂಗ್ಯವಾಡಿರುವುದು ತಿಳಿದು ಬಂದಿದೆ. 'ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅದೇನೋ ಹಳ್ಳಿ ವಾಸ್ತವ್ಯ ಅಂತ ಮಾಡಿದ್ದರು. ರಾತ್ರಿ 2 ಗಂಟೆಗೆ ಹಾಸಿಗೆ, ದಿಂಬು ತಗೊಂಡು ಹೋಗಿ ಉಳಿಯುತ್ತಿದ್ದರು. ಮೂರನೇ ದಿನ ಈ ಸಾಮಾಗ್ರಿಗಳನ್ನು ವಾಪಸ್ ಕೊಂಡೊಯ್ಯಲಾಗುತ್ತಿತ್ತು. ಕಡೆ ಪಕ್ಷ ವಾದ್ರು ಹಾಸಿಗೆ , ದಿಂಬನಾದ್ರು ಬಿಟ್ಟು ಹೋಗಬಹುದಿತ್ತಲ್ಲವಾ' ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಆಯೋಜಿಸಿದ್ದ ಭಾರತ ನರಳುತ್ತಿದೆ ಎಂಬ ರ್ಯಾಂಲಿಯಲ್ಲಿ ಮಾತನಾಡುತ್ತಿದ್ದ ಅವರು, ಪರಿವರ್ತನಾ ಯಾತ್ರೆಗೆ ಜನರನ್ನು ಕರೆತರಲು ಸೀರೆ ಹಂಚಿ ದುಡ್ಡು ಕೊಡುತ್ತಿದ್ದಾರೆಂಬ ಬಿಜೆಪಿ ಯಿಂದ ನಾಲ್ಕು ಬಾರಿ ಶಾಸಕನಾಗಿ ಒಮ್ಮೆ ಮಂತ್ರಿಯಾಗಿದ್ದ ಸೊಗಡು ಶಿವಣ್ಣ ಹೇಳಿದ್ದಾರೆ. ಈ ಮೂಲಕ ಯಾತ್ರೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಇಷ್ಟಾದರೂ ದುಡ್ಡು ಸೀರೆ ಹಂಚಿದ್ರು ಬಿಜೆಪಿ ಯಾತ್ರೆಗೆ ಜನರಿಲ್ಲ , 2 ರಿಂದ 3 ಜನರು ಸೇರುತ್ತಿಲ್ಲ ಎಂದು ಲೇವಡಿ ಮಾಡಿದರು.
Comments