ಬಂಡಾಯ ಶಾಸಕರ ವಿರುದ್ಧ ಗೆಲ್ಲುವ ಅಭ್ಯರ್ಥಿಗಳಿಗಾಗಿ ಜೆಡಿಎಸ್ ಹುಡುಕಾಟ

ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 65 ಸೀಟುಗಳನ್ನು ಗೆಲ್ಲಲಿದೆ ಎಂಬ ಆಂತರಿಕ ಸಮೀಕ್ಷೆ ವರದಿ ಹೇಳಿದೆ, ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮೈಸೂರು ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮಂಡ್ಯದ 7 ವಿಧಾನಸಭೆ ಕ್ಷೇತ್ರಗಳಲ್ಲೂ ಗೆಲ್ಲಲೇ ಬೇಕೆಂದು ನಿರ್ಧರಿಸಿರುವ ಜೆಡಿಎಸ್ ಸೂಕ್ತ ಅಭ್ಯರ್ಥಿಗಳಿಗಾಗಿ ಹುಡುಕಾಡುತ್ತಿದೆ.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾತಿನಿಧ್ಯವಿರುವ ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಸೂಕ್ತ ಅಭ್ಯರ್ಥಿಗಳಿಗಾಗಿ ಬೇಟೆ ಆರಂಭವಾಗಿದೆ. ಶ್ರೀರಂಗಪಟ್ಟಣ ಮತ್ತು ನಾಗಮಂಗಲಗಳಲ್ಲಿ ಅಭ್ಯರ್ಥಿಗಳಿಗಾಗಿ ಶೋಧನೆ ನಡೆಸಲಾಗುತ್ತಿದೆ.ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 65 ಸೀಟುಗಳನ್ನು ಗೆಲ್ಲಲಿದೆ ಎಂಬ ಆಂತರಿಕ ಸಮೀಕ್ಷೆ ವರದಿ ಹೇಳಿದೆ, ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮೈಸೂರು ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮಾಜಿ ಸಿಎಂ ಎಸ್.ಎಂ ಕೃಷ್ಣ ಜೊತೆ ಕಾಂಗ್ರೆಸ್ ತ್ಯಜಿಸಿದ ರವೀಂದ್ರ ಶ್ರೀಕಂಠಯ್ಯ ಅವರನ್ನು ಜೆಡಿಎಸ್ ಗೆ ಸೆಳೆಯಲು ಕುಮಾರ ಸ್ವಾಮಿ ಮುಂದಾಗಿದ್ದಾರೆ.. ಡಿಸೆಂಬರ್ ನಲ್ಲಿ ಪಕ್ಷ ಸೇರುವಂತೆ ಆಹ್ವಾನಿಸಿದ್ದಾರೆ, ಆದರೆ ರವೀಂದ್ರ ಶ್ರೀಕಂಠಯ್ಯ ಬಿಜೆಪಿ ಸೇರುವ ಇಚ್ಚೆ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ರವೀಂದ್ರ ಶ್ರೀಕಂಠಯ್ಯ ಜೊತೆ ಮಾತುಕತೆ ನಡೆಸಿರುವ ಜೆಡಿಎಸ್ ಮುಖಂಡರು, ಶ್ರೀರಂಗಪಟ್ಟಣದಿಂದ ಟಿಕೆಟ್ ನೀಡಲಿದ್ದು, ಬಂಡಾಯ ಶಾಸಕ ರಮೇಶ್ ಬಂಡಿ ಸಿದ್ದೇಗೌಡ ವಿರುದ್ಧ ಸ್ಪರ್ಧಿಸಲು ಟಿಕೆಟ್ ನೀಡುವ ಭರವಸೆ ವ್ಯಕ್ತ ಪಡಿಸಿದ್ದಾರೆ. 2008 ಮತ್ತು 2013ರ ವಿಧಾನಸಭೆ ಚುನಾವಣೆಯಲ್ಲಿ ರಮೇಶ್ ಬಂಡಿ ಸಿದ್ದೇಗೌಡ ವಿರುದ್ಧ ಸ್ಪರ್ಧಿಸಿದ್ದ ರವೀಂದ್ರ ಶ್ರೀಕಂಠಯ್ಯತೀರಾ ಕಡಿಮೆ ಅಂತರದಲ್ಲಿ ಪರಾಭವ ಗೊಂಡಿದ್ದರು.
ಕುಮಾರಸ್ವಾಮಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ನಾಗಮಂಗಲ ಶಾಸಕ ಚಲುವರಾಯ ಸ್ವಾಮಿ ವಿರುದ್ಧ ಸುರೇಶ್ ಗೌಡ ಮತ್ತು ಎಲ್. ಆರ್ ಶಿವರಾಮೇಗೌಡ ಅವರನ್ನು ಕ ಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ. ಸುರೇಶ್ ಗೌಡ ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ಮಂಡ್ಯದ 7 ವಿಧಾನಸಭೆ ಕ್ಷೇತ್ರಗಳಲ್ಲೂ ಗೆಲ್ಲಲೇ ಬೇಕೆಂದು ನಿರ್ಧರಿಸಿರುವ ಜೆಡಿಎಸ್ ಸೂಕ್ತ ಅಭ್ಯರ್ಥಿಗಳಿಗಾಗಿ ಹುಡುಕಾಡುತ್ತಿದೆ. ಬುಧವಾರ ಜೆಡಿಎಸ್ ಕುಮಾರ ಪರ್ವ ಎಂಬ ರ್ಯಾಲಿ ಆರಂಭಿಸಿದ್ದು, ಮೈಸೂರಿನ 11 ಕ್ಷೇತ್ರಗಳ ಪೈಕಿ 9 ರಲ್ಲಾದರೂ ಜಯ ಗಳಿಸಬೇಕೆಂಬ ಹಠಕ್ಕೆ ಬಿದ್ದಿದೆ. ಚಾಮುಂಡೇಶ್ವರಿ ಮತ್ತು ಮೀಸಲಾತಿ ಕ್ಷೇತ್ರಗಳ ಕಡೆಗೆ ತಮ್ಮ ಗಮನ ಹರಿಸಿದೆ. ಶಾಸಕ ಚಿಕ್ಕಮಾದು ನಿಧನದಿಂದ ಜೆಡಿಎಸ್ ಗೆ ಬಹಳ ಹಿನ್ನೆಡೆಯಾಗಿದೆ.ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಸಂಚರಿಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಕಳೆದ 10 ವರ್ಷಗಳಿಂದ ಅಧಿಕಾರವಿಲ್ಲದೇ ಹಪ ಹಪಿಸುತ್ತಿರುವ ಜೆಡಿಎಸ್ ಒಕ್ಕಲಿಗರನ್ನು ಸಂಘಟನಾತ್ಮಕವಾಗಿ ಒಗ್ಗೂಡಿಸುವ ವಿಶ್ವಾಸ ವ್ಯಕ್ತ ಪಡಿಸಿದೆ, ಕುಮಾರ ಸ್ವಾಮಿ ಮತ್ತು ದೇವೇಗೌಡ ಭಾವನಾತ್ಮಕವಾಗಿ ಜನರನ್ನು ತಲುಪಲು ಕಠಿಣ ಶ್ರಮ ವಹಿಸುತ್ತಿದ್ದಾರೆ.
Comments