ಪ್ರಜ್ವಲ್ ಮತ್ತು ನಿಖಿಲ್ ರಾಜಕೀಯಕ್ಕೆ ಬರುವುದರ ಬಗ್ಗೆ ಪ್ರತಿಕ್ರಯಿಸಿದ ಗೌಡರು

ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಬರುವುದು ಖಚಿತ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದರು.
ಅತ್ತ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಯಾಂಡಲ್ ವುಡ್ ನಲ್ಲಿ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಸ್ಟಾರ್ ಪ್ರಚಾರಕನಾಗಿ ಬಳಸುವ ಇರಾದೆ ಪಕ್ಷಕ್ಕಿದೆ ಎನ್ನಲಾಗಿದೆ. ಹಾಗಿದ್ದರೂ ನಿಖಿಲ್ ಕೂಡಾ ರಾಜಕೀಯಕ್ಕೆ ಬರುತ್ತಾರೆ ಎಂದಿರುವ ಗೌಡರ ಮನದಲ್ಲಿ ಇವರಿಬ್ಬರನ್ನೂ ಕಣಕ್ಕಿಳಿಸುವ ಯೋಜನೆ ಇದೆಯಾ ಎನ್ನುವುದು ಸ್ಪಷ್ಟವಾಗಿಲ್ಲ.ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಜೆಡಿಎಸ್ ವರಿಷ್ಠ ದೇವೇಗೌಡ ತಮ್ಮ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ಸ್ಪಷ್ಟ ನಿರ್ಧಾರ ಹೇಳಿಲ್ಲ.
Comments