ಸಿದ್ದರಾಮಯ್ಯ ಸರ್ಕಾರಕ್ಕೆ ಚಾಟಿ ಬೀಸಿದ ಎಚ್ ಡಿಕೆ
ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆಯಾಗಲು ಎಚ್.ಡಿ.ರೇವಣ್ಣ ಕಾರಣವೆಂದ ಅವರು ಸಿದ್ದರಾಮಯ್ಯನವರು ರಾಜ್ಯದ ಪ್ರತಿ ಕುಟುಂಬದ ಮೇಲೆ 50 ಸಾವಿರ ರೂ. ಸಾಲದ ಹೊರೆ ಹೊರಸಿದ್ದಾರೆ ಎಂದು ಆರೋಪಿಸಿದರು.
ಭಾಗ್ಯ ಯೋಜನೆಯ ಕೊಡುಗೆ ನೀಡಿರುವ ಸಿದ್ದರಾಮಯ್ಯ ಸರ್ಕಾರ ನೀರಾವರಿ ಹಾಗೂ ರಸ್ತೆ ಅಭಿವೃದ್ಧಿಯ ಹಣ ದೋಚಿದ್ದಾರೆ. ನಾಡಿನ ಜನರನ್ನ ಸಾಲಗಾರನ್ನಾಗಿ ಮಾಡಿದ್ದಾರೆ. ಸಾಲಮನ್ನಾ ಘೋಷಣೆ ಮಾಡಿ 4 ತಿಂಗಳಾಗಿದೆ ಎಷ್ಟು ಜನರ ಸಾಲ ಮನ್ನಾ ಮಾಡಲು ಹಣ ನೀಡಿದ್ದಾರೆ ಎಂದು ಎಚ್ ಡಿಕೆ ಪ್ರಶ್ನಿಸಿದರು.ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಯನ್ನ ಆಲಿಸಿ ಪ್ರಣಾಳಿಕೆಯಲ್ಲಿ ಅದಕ್ಕೆ ಪರಿಹಾರ ಒದಗಿಸುವುದೇ ನಮ್ಮ ಗುರಿ ಕುಮಾರಸ್ವಾಮಿ ಜೆಡಿಎಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
Comments