ಚಿಕ್ಕಮಗಳೂರಲ್ಲಿ ಗ್ರಾಮ ವಾಸ್ತವ್ಯ ಆರಂಭಿಸಿದ ಎಚ್ ಡಿಕೆ

ಚಿಕ್ಕಮಗಳೂರು ಜಿಲ್ಲೆಯಿಂದ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಆರಂಭಿಸಿದರು. ಚಿಕ್ಕಮಗಳೂರು ತಾಲೂಕು ಮುಗುಳವಳ್ಳಿಯ ಧರ್ಮಪಾಲ ಅವರ ಮನೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು.
ಮುಗುಳವಳ್ಳಿಯಲ್ಲಿಯ ಧರ್ಮಪಾಲ ಅವರ ಮನೆಯಲ್ಲಿ ಉಪಹಾರ ಸೇವಿಸಿದ ಕುಮಾರಸ್ವಾಮಿ ಅವರು, ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು, ಅಹವಾಲು ಸ್ವೀಕರಿಸಿದರು. ನಂತರ ಯಾತ್ರೆಯನ್ನು ಮುಂದುವರೆಸಿದರು. ಗ್ರಾಮಸ್ಥರು ಮಾಜಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಬೀಳ್ಕೊಟ್ಟರು. ಬುಧವಾರ ಕುಮಾರಪರ್ವ ಯಾತ್ರೆ ಕಡೂರು, ಬೀರೂರು ಮಾರ್ಗವಾಗಿ ತರೀಕೆರೆಗೆ ತಲುಪಲಿದೆ. ತರೀಕೆರೆಯಲ್ಲಿ ಸಮಾವೇಶ ನಡೆಯಲಿದ್ದು, ಅಲ್ಲಿಂದ ಶಿವಮೊಗ್ಗಕ್ಕೆ ತೆರಳಲಿದೆ. ಇಂದು ರಾತ್ರಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಯೂ ಇಂದು ಅಂತ್ಯಗೊಳ್ಳಲಿದೆ.
Comments