ಎಚ್.ಡಿ ಕುಮಾರಸ್ವಾಮಿ ಗ್ರಾಮದಲ್ಲಿ ಜನಸಂಪರ್ಕ ಸಭೆ
ತಾಲ್ಲೂಕಿನ ಮುಗುಳವಳ್ಳಿಯ ದಲಿತ ಸಮುದಾಯದ ಧರ್ಮಪಾಲ ಅವರ ಮನೆಯಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದಾರೆ.
ತಾಲ್ಲೂಕಿನ ಮುಗುಳವಳ್ಳಿಯ ದಲಿತ ಸಮುದಾಯದ ಧರ್ಮಪಾಲ ಅವರ ಮನೆಯಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದಾರೆ. ಮಂಗಳವಾರ ತಡರಾತ್ರಿ 3.50ರ ಸುಮಾರಿಗೆ ಗ್ರಾಮ ತಲುಪಿದ ಅವರು ಧರ್ಮಪಾಲ ಅವರ ಮನೆಗೆ ತೆರಳಿದರು. ಬೆಳ್ಳಿಗ್ಗೆ 6.15ರ ಹೊತ್ತಿಗೆ ಎದ್ದರು. ಧರ್ಮಪಾಲ ಅವರ ಮನೆಯಲ್ಲಿ ರೊಟ್ಟಿ, ಚಟ್ನಿ, ಸೊಪ್ಪಿನ ಪಲ್ಯ ಉಪಾಹಾರ ಸೇವಿಸಿದರು. ನಂತರ ಗ್ರಾಮದಲ್ಲಿ ಜನಸಂಪರ್ಕ ಸಭೆ ಉದ್ದೇಶಿಸಿ ಮಾತನಾಡಿದರು.
Comments