ಕುಮಾರ ಪರ್ವ ಯಾತ್ರೆಗೆ ಆರಂಭದಲ್ಲೇ ವಿಘ್ನ
ಮೈಸೂರಿನಲ್ಲಿ ಪ್ರಚಾರ ಮುಗಿಸಿ ಚಿಕ್ಕಮಗಳೂರಿನ ಮುಗುಳುವಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ಪ್ರಯಾಣಿಸಬೇಕಿತ್ತು. ಬಸ್ ಕೆಟ್ಟಿರುವುದರಿಂನ ಸಂಚಾರ ಸಾಧ್ಯವಾಗದೆ ಪರದಾಡಬೇಕಾಗಿದೆ.
ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಪರ ಪ್ರಚಾರಕ್ಕಾಗಿ ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿದ್ದ ಐಷಾರಾಮಿ ಬಸ್ 'ವಿಕಾಸವಾಹಿನಿ' ಯಾತ್ರೆಯ ಆರಂಭದಲ್ಲೇ ಕೆಟ್ಟು ನಿಂತಿದೆ. ಮೈಸೂರಿನಲ್ಲಿ ಪ್ರಚಾರ ಮುಗಿಸಿ ಚಿಕ್ಕಮಗಳೂರಿನ ಮುಗುಳುವಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ಪ್ರಯಾಣಿಸಬೇಕಿತ್ತು. ಬಸ್ ಕೆಟ್ಟಿರುವುದರಿಂನ ಸಂಚಾರ ಸಾಧ್ಯವಾಗದೆ ಪರದಾಡಬೇಕಾಗಿದೆ. ಮೆಕಾನಿಕ್ಗಳು ಆಗಮಿಸಿದ್ದು ರಿಪೇರಿ ಕಾರ್ಯ ಮಾಡುತ್ತಿದ್ದಾರೆ. ಕುಮಾರ ಸ್ವಾಮಿ ಅವರು ಬಸ್ನಲ್ಲೇ ಕುಳಿತಿದ್ದಾರೆ.
Comments