ರಾಜ್ಯವನ್ನು ಅಭಿವೃದ್ಧಿ ಕಡೆ ಕೊಂಡೊಯ್ಯುತ್ತೇನೆoಬ ಆತ್ಮ ವಿಶ್ವಾಸವಿದೆ : ಎಚ್ ಡಿಕೆ

ನಾನು ಮುಖ್ಯಮಂತ್ರಿಯಾಗಬೇಕೆಂದು ನನ್ನ ತಂದೆ ಬಯಸುತ್ತಿರುವುದು ಮೋಜು ಮಾಡಲು ಅಲ್ಲ, ನಾನು ರಾಜ್ಯವನ್ನು ಉತ್ತಮ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತೇನೆ ಎಂಬ ಆತ್ಮ ವಿಶ್ವಾಸ ಅವರಿಗಿದೆ ಎಂದು ಹೇಳಿದ್ದಾರೆ.
ಕೇವಲ ಒಕ್ಕಲಿಗರ ಬೆಂಬಲದಿಂದ ಜೆಡಿಎಸ್ ಅಧಿಕಾರದ ಗದ್ದುಗೇಯೇರಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ ಕುಮಾರಸ್ವಾಮಿ ವೀರಶೈವ ಸಮುದಾಯ ಹಾಗೂ ದಲಿತರ ಓಲೈಕೆಗೆ ಮುಂದಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಬೆಂಬಲ ನೀಡಬೇಡಿ ಎಂದು ಮನವಿ ಮಾಡಿದರು. ಜೊತೆಗೆ 113 ಸೀಟು ಪಡೆಯಲು ಜನ ಜೆಡಿಎಸ್ ಬೆಂಬಲಿಸಬೇಕು ಎಂದು ತಿಳಿಸಿದರು.
2007 ರಲ್ಲಿ ನಾನು ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದರೆ, ಅನಂತ್ ಕುಮಾರ್ ಹಾಗೂ ಇನ್ನಿತರ ಬಿಜೆಪಿ ನಾಯಕರೇ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತಿದ್ದರು ಎಂದು ಹೇಳಿದ ಅವರು, ತಾವು ಸಿಎಂ ಆಗಿದ್ದ ವೇಳೆ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಬೆಳ್ಳಿಯ ತೊಟ್ಟಿಲು ನೀಡಿದ್ದನ್ನು ಸ್ಮರಿಸಿದರು. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಮೈಸೂರಿನ ದಲಿತರ ಮನೆಯಲ್ಲಿ ಭೋಜನ ಸೇವಿಸಿದ್ದಾಗಿ ತಿಳಿಸಿದರು, ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನತೆ ಅಸಮಾಧಾನಗೊಂಡಿದ್ದಾರೆ, ಹೀಗಾಗಿ ಪ್ರಾದೇಶಿಕ ಪಕ್ಷದ ಕಡೆಗೆ ಜನರು ತಮ್ಮ ಪ್ರೀತಿ ಹಾಗೂ ಒಲವು ತೋರಬೇಕು ಎಂದು ಮನವಿ ಮಾಡಿದರು.
Comments