ನೋಟು ಬ್ಯಾನ್ ಬೆಂಬಲಿಸಿದ ರಾಷ್ಟ್ರದ ಜನತೆಯನ್ನು ಶ್ಲಾಘಿಸಿದ ಮೋದಿ

ನೋಟು ಅಮಾನ್ಯಕ್ಕೆ ಇಂದು ವರ್ಷ ತುಂಬಿದ್ದು, ಐತಿಹಾಸಿಕ ನಿರ್ಧಾರ ಬೆಂಬಲಿಸಿದ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.'125 ಕೋಟಿ ಜನರು ನಿರ್ಣಾಯಕ ಸಮರದಲ್ಲಿ ಹೋರಾಡಿ ಜಯ ಗಳಿಸಿದ್ದಾರೆ'ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ನೋಟು ಅಮಾನ್ಯಕ್ಕೆ ಇಂದು ವರ್ಷ ತುಂಬಿದ್ದು, ಐತಿಹಾಸಿಕ ನಿರ್ಧಾರಬೆಂಬಲಿಸಿದ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.'125 ಕೋಟಿ ಜನರು ನಿರ್ಣಾಯಕ ಸಮರದಲ್ಲಿ ಹೋರಾಡಿ ಜಯ ಗಳಿಸಿದ್ದಾರೆ'ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ. ನೋಟು ಅಮಾನ್ಯದಿಂದ ಆದ ಪ್ರಮುಖ ಬೆಳವಣಿಗೆಗಳ ಪಟ್ಟಿಯನ್ನೂ ಟ್ವೀಟ್ ಮಾಡಿರುವ ಪಿಎಂ ಮೋದಿ 'ಇದೊಂದು ಐತಿಹಾಸಿಕ ಮತ್ತು ಬಹು ಆಯಾಮದ ಯಶಸ್ಸು' ಎಂದು ಬರೆದಿದ್ದಾರೆ.
ಪಟ್ಟಿಯಲ್ಲಿ ಬಿಂಬಿಸಲಾಗಿರುವ ನಾಲ್ಕು ಪ್ರಮುಖ ಸಾಧನೆಗಳೆಂದರೆ
*ಭೂಗತವಾಗಿದ್ದ ಅಪಾರ ಪ್ರಮಾಣದ ಕಪ್ಪು ಹಣ ಹೊರಬಂದಿದೆ.
*ಉಗ್ರವಾದ ಮತ್ತು ನಕ್ಸಲರಿಗೆ ನಿರ್ಣಾಯಕ ಹೊಡೆತ
*ಭಾರತದ ಹಣಕಾಸು ವ್ಯವಹಾರದಲ್ಲಿ ಭಾರೀ ಶುದ್ಧೀಕರಣ
*ಔಪಚಾರಿಕವಾಗಿ ಬಡವರಿಗೆ ಉತ್ತಮ ಉದ್ಯೋಗ ಸಿಗುವಂತೆ ಮಾಡಿದೆ. ಉದ್ಯೋಗಿಗಳ ಸಂಬಳ ನೇರವಾಗಿ ಖಾತೆಗಳಿಗೆ ಜಮೆ ಆಗುವಂತಾಗಿದೆ.
Comments