ಟ್ರಂಪ್ ಗೆ ಬೆರಳು ತೋರಿಸಿದ್ರೆ ಕೆಲಸ ಹೋಗುತ್ತೆ ಹುಷಾರ್
ವಾಷಿಂಗ್ಟನ್ : ಟ್ರಂಪ್ ತಮ್ಮ ಬೆಂಗಾವಲು ಪಡೆಯ ಜತೆ ಗಾಲ್ಫ್ ಕೋರ್ಸ್ ಗೆ ತೆರಳುತ್ತಿದ್ದರು, ಈ ವೇಳೆ ವಾಹನಗಳು ತನ್ನನ್ನು ಹಾದು ಹೋಗುತ್ತಿದ್ದ ಸಂದರ್ಭದಲ್ಲಿ ಬೆಂಗಾವಲು ಪಡೆಗೆ ಓರ್ವ ಯುವತಿ ಮಧ್ಯದ ಬೆರಳು ತೋರಿಸಿ ಕೆಲಸ ಕಳೆದುಕೊಂಡಿರುವ ಘಟನೆ ನಡೆದಿದೆ.
ವಾಷಿಂಗ್ಟನ್ : ಟ್ರಂಪ್ ತಮ್ಮ ಬೆಂಗಾವಲು ಪಡೆಯ ಜತೆ ಗಾಲ್ಫ್ ಕೋರ್ಸ್ ಗೆ ತೆರಳುತ್ತಿದ್ದರು, ಈ ವೇಳೆ ವಾಹನಗಳು ತನ್ನನ್ನು ಹಾದು ಹೋಗುತ್ತಿದ್ದ ಸಂದರ್ಭದಲ್ಲಿ ಬೆಂಗಾವಲು ಪಡೆಗೆ ಓರ್ವ ಯುವತಿ ಮಧ್ಯದ ಬೆರಳು ತೋರಿಸಿದ್ದಾರೆ. ಈ ವೇಳೆ ಬೆಂಗಾವಲು ಪಡೆಯ ಜತೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ರೀತಿ ಮಾಡಿದ್ದಾಳೆ. ಜೂಲಿ ಬ್ರಿಸ್ಕಮ್ಯಾನ್ ಎಂಬ 50 ವರ್ಷದ ಮಹಿಳೆ ಕಳೆದ ತಿಂಗಳು ಸ್ಟೆರ್ಲಿಂಗ್ ನಲ್ಲಿ ಸೈಕಲ್ ತುಳಿಯುತ್ತಾ ಹೋಗುತ್ತಿದ್ದರು.
ಈಗ ಈ ಮಹಿಳೆಯನ್ನು ಕಂಪನಿ ಆಕೆಯನ್ನು ಕೆಲಸದಿಂದ ತೆಗೆದು ಹಾಕಿದೆ. ಆಕೆಯ ಧೈರ್ಯ ಸಾಹಸಗಳನ್ನು ಮೆಚ್ಚಿ ನೆಟ್ಟಿಗರು ಹಾಡಿ ಹೊಗಳುತ್ತಾ ಕಾಮೆಂಟ್ ಗಳನ್ನು ಬರೆದಿದ್ದಾರೆ. ಮುಂಬರುವ ಚುನಾವಣೆಗೆ ಆಕೆ ನಿಲ್ಲಬೇಕೆಂದು ಸೂಚಿಸಿದ್ದಳು. ಅಮೆರಿಕಾದ ಕೆಲವು ಕಾಮಿಡಿ ಶೋಗಳಲ್ಲೂ ಈ ಘಟನೆಯನ್ನು ಪ್ರಸ್ತಾಪಿಸಲಾಯಿತು. ಈ ಘಟನೆ ಆಕೆಯ ಉದ್ಯೋಗಕ್ಕೆ ಮುಳುವಾಗಿದೆ. ಕಂಪನಿಗೆ ಕೆಟ್ಟ ಹೆಸರು ತಂದಿದ್ದಾರೆ ಎಂದು, ಹಾಗೂ ಸಾಮಾಜಿಕ ಮಾಧ್ಯಮದ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಆಕೆಯನ್ನು ಉದ್ಯೋಗದಿಂದ ತೆಗೆದು ಹಾಕಲಾಗಿದೆ.
Comments