ನೋಟ ಬ್ಯಾನ್ ಬಳಿಕ ನಕ್ಸಲ್ ಇಳಿಕೆ ಕಂಡಿದೆ - ಅರುಣ್ ಜೇಟ್ಲಿ

ನವದೆಹಲಿ: ನೋಟು ಬ್ಯಾನ್ ನಿಂದಾಗಿ ಕಪ್ಪು ಹಣ ದಂಧೆಯಲ್ಲಿರುವವರಿಗೆ ಚಾಟಿಯೇಟು ನೀಡಿದ್ದೇವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ನೋಟು ಬ್ಯಾನ್ ಮಾಡಿ ಒಂದು ವರ್ಷವಾಗುತ್ತಿರುವುದರಿಂದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಗೋಷ್ಠಿ ನಡೆಸಿದರು.
ನವದೆಹಲಿ: ನೋಟು ಬ್ಯಾನ್ ನಿಂದಾಗಿ ಕಪ್ಪು ಹಣ ದಂಧೆಯಲ್ಲಿರುವವರಿಗೆ ಚಾಟಿಯೇಟು ನೀಡಿದ್ದೇವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ನೋಟು ಬ್ಯಾನ್ ಮಾಡಿ ಒಂದು ವರ್ಷವಾಗುತ್ತಿರುವುದರಿಂದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡುತ್ತಿದ್ದ ಅವರು., ನೋಟು ಬ್ಯಾನ್ ನಿಂದಾಗಿ ಇಡೀ ನಾಗರಿಕರ ಹಿತಾಸಕ್ತಿ ಕಾಪಾಡಲಾಗಿದೆ , ಅಲ್ಲದೇ ಜಿಎಸ್ ಟಿ ಯಂತಹ ಆರ್ಥಿಕ ಸುಧಾರಣೆಯನ್ನು ಜಾರಿಗೆ ತಂದಿದೆ. ನೋಟು ಬ್ಯಾನ್ ನಿರ್ಧಾರವನ್ನು ವಿರೋಧಿಸುತ್ತಿರುವರೆಲ್ಲರೂ ಕಪ್ಪು ಹಣ ದಂಧೆಯಲ್ಲಿ ಇರುವರಾಗಿದ್ದಾರೆ. ಆದ್ದರಿಂದ ಕೆಲವು ಪಕ್ಷಗಳಿಗೆ ಈ ನಿರ್ಧಾರ ಕಹಿಯಾಗಿದ್ದು, ಆದರೆ ದೇಶದ ಕೋಟ್ಯಾಂತರ ಜನರ ಪಾಲಿಗೆ ಇದು ವರದಾನವಾಗಿ ಪರಿಣಮಿಸಿದೆ ಎಂದರು. ಅಲ್ಲದೇ ನೋಟ್ ಬ್ಯಾನ್ ಬಳಿಕ ನಕ್ಸಲ್ ಚಟುವಟಿಕೆ ಇಳಿಕೆ ಕಂಡಿದೆ ಎಂದು ತಿಳಿಸಿದರು.
ನೋಟು ಬ್ಯಾನ್ ಎಂಬುದು ಲೂಟಿ ಎಂದು ಪ್ರತಿಪಕ್ಷಗಳು ಬಣ್ಣಿಸುತ್ತಿವೆ. ಹಾಗಾದರೆ 2ಜಿ ಹಗರಣ, ಕಾಮನ್ ವೆಲ್ತ್ ಕ್ರೀಡಾಕೂಟ ಹಗರಣ, ಕಲ್ಲಿದ್ದಲು ಗಣಿ ಹಂಚಿಕೆ ಹಗರಣ , ಕಲ್ಲಿದ್ದಲು ಗಣಿ ಹಂಚಿಕೆ ಹಗರಣವನ್ನು ಏನೆನ್ನಬೇಕು ಎಂದು ಕಾಂಗ್ರೆಸ್ ಗೆ ಜೇಟ್ಲಿ ತಿರುಗೇಟು ನೀಡಿದರು.
Comments