ಹಾಸನ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕರ್ಮಕಾಂಡ ಬಯಲು

ಹಾಸನ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಹಣ ಹಾಗು ಸೀರೆ ಹಂಚಿಕೆ ಮಾಡಲಾಗುತಿದೆ ಎಂಬ ಆರೋಪ ಕೇಳಿಬರುತಿದೆ. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಿತು, ಈ ಒಂದು ಸಮಾವೇಶದಲ್ಲಿ ಹಣ ಹಾಗು ಸೀರೆ ಹಂಚಿಕೆ ಮಾಡಲಾಗಿದೆ.
ಒಂದು ಕೂಪನ್ ಪಡೆದರೆ ಒಂದು ಸೀರೆ ಹಾಗು 500 ರೂಪಯಿಯನ್ನು ಹಂಚಿಕೆ ಮಾಡಲಾಗುತ್ತಿತ್ತು. ಹಾಗಾಗಿ ಸಮಾವೇಶನಡೆದಂತಹ ಸ್ಥಳದಲ್ಲಿ ಕೂಪನ್ ಗೆ ಮಹಿಳೆಯರು ಮುಗಿಬಿದ್ದಿದ್ದರು. ವೇದಿಕೆಯಿಂದ ಇಳಿಯುತ್ತಿದ್ದಂತೆ ಕೂಪನ್ ಹಂಚಿಕೆಮಾಡಲಾಗುತ್ತಿತ್ತು ಎನ್ನುವಂತಹ ಆರೋಪಗಳು ಕೇಳಿಬರುತ್ತಿತ್ತು. ರಾಜ್ಯದ್ಯಾದಂತ ಬಿಜೆಪಿ ಪರಿವರ್ತನಾ ಯಾತ್ರೆ ನಡೆಯುತಿದೆ, ಆದರೆ ಹಲವು ಭಾಗಗಳಲ್ಲಿ ಯಾತ್ರೆ ನಡೆಯುವ ಸಂದರ್ಭಲ್ಲಿ ಕಾರ್ಯಕರ್ತರಿಗೆ ಹಣವನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪ ಕೇಳಿಬರುತ್ತಿದೆ .
Comments