ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ರದ್ದು : ರಾಹುಲ್ ಭರವಸೆ

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರಿಗೆ ಹೊರೆಯಾಗಿರುವ ಜಿಎಸ್‌ಟಿಯನ್ನು ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್ ಉಪಾಧ್ಯಕ್ಷರು ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ ವರ್ತಕರು, ಗ್ರಾಹಕರು ಸೇರಿದಂತೆ ಎಲ್ಲರ ಮೇಲೂ ತೀವ್ರ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಹೇಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 2019ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ ಎಂದು ಪ್ರಧಾನಿ ನರೇಂದ್ರಮೋದಿ ಬೊಬ್ಬೆ ಹೊಡೆಯುತ್ತಿದ್ದಾರೆ. ಎನ್‌ಐಟಿಐ ಆಯೋಗದ ವರದಿ ಪ್ರಕಾರ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಇತರೆ ರಾಜ್ಯಗಳ ಸರ್ಕಾರಗಳಿಗಿಂತ ಭ್ರಷ್ಟಾಚಾರದಲ್ಲಿ ಕೆಳಗಿದೆ. ಬಿಜೆಪಿ ಅಧಿಕಾರದ ಗುಜರಾತ್‌ಗೆ ಹೋಲಿಸಿದಲ್ಲಿ ಹಿಮಾಚಲ ಪ್ರದೇಶ ಅಭಿವೃದ್ಧಿಯಲ್ಲೂ ಮುಂದಿದೆ ಎಂದು ವರದಿಯಲ್ಲಿ ಹೇಳಿದೆ ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ.
ಹಿಮಾಚಲಪ್ರದೇಶದ ಪೌಂಟ ಸಾಹಿಬ್, ಚಂಬ ಮತ್ತು ನಾಗ್ರೋಟದಲ್ಲಿ ಚುನಾವಣಾ ಱ್ಯಾಲಿಯಲ್ಲಿ ಮಾತನಾಡಿದ ರಾಹುಲ್, ಶೇ. 28 ರಷ್ಟು ಜಿಎಸ್‌ಟಿ ತೀರಾ ಹೆಚ್ಚಾಯಿತು. ಇದರಿಂದ ವ್ಯವಹಾರ ನಡೆಸುವುದೇ ಕಷ್ಟ ಎಂಬಂತಾಗಿದೆ ಎಂದರು.ನೋಟು ಅಮಾನ್ಯಕರಣಕ್ಕೆ ನಾಳೆಗೆ ಒಂದು ವರ್ಷ ತುಂಬಲಿದ್ದು, ಅದರ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ ಎಂದು ಅವರು ಹೇಳಿದ್ದಾರೆ.
Comments