ನಟ ಶಿವರಾಜ್ ಕುಮಾರ್ ಗೃಹ ಸಚಿವರನ್ನು ಭೇಟಿ ಮಾಡಿದ್ದೇಕೆ ?

07 Nov 2017 3:20 PM | Politics
540 Report

ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಆಗಮಿಸಿದ ಶಿವಣ್ಣ, ಮಾನ್ಯತಾ ಟೆಕ್ ಪಾರ್ಕ್ ನಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವುದರ ಕುರಿತು ಗೃಹ ಮಂತ್ರಿಗಳ ಗಮನ ಸೆಳೆದಿದ್ದಾರೆ.

ಆರಂಭದಲ್ಲಿ 30 ಸಾವಿರ ಮಂದಿ ಉದ್ಯೋಗಿಗಳಿರುತ್ತಾರೆಂದು ತಿಳಿಸಲಾಗಿತ್ತು. ಪ್ರಸ್ತುತ ಒಂದೂವರೆ ಲಕ್ಷ ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ನಿತ್ಯವೂ ಸಮಸ್ಯೆಯುಂಟಾಗುತ್ತಿದೆ ಎಂದಿದ್ದಾರೆ. ಗೃಹ ಮಂತ್ರಿಗಳ ಭೇಟಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಮಾನ್ಯತಾ ಟೆಕ್ ಪಾರ್ಕ್ ನಿಂದಾಗಿ ಸ್ಥಳೀಯ ನಿವಾಸಿಗಳೆದುರಿಸುತ್ತಿರುವ ಸಮಸ್ಯೆ ಕುರಿತು ಗಮನ ಸೆಳೆದಿದ್ದೇವೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆಂದಿದ್ದಾರೆ.

Edited By

Hema Latha

Reported By

Madhu shree

Comments