ತಮ್ಮ ರಾಜಕೀಯ ಎಂಟ್ರಿ ಊಹಾಪೋಹಗಳಿಗೆ ತೆರೆಎಳೆದ ಕಮಲ್ ಹಾಸನ್
ಖ್ಯಾತ ಬಹು ಭಾಷಾ ನಟ ಕಮಲ್ ಹಾಸನ್ ಇಂದು ತೆರೆ ಎಳೆದಿದ್ದು, ಅಭಿಮಾನಿಗಳ ಒತ್ತಾಸೆಯಂತೆ ಜನಸೇವೆ ಮಾಡಲು ರಾಜಕೀಯ ಪ್ರವೇಶಿಸುತ್ತಿದ್ದೇನೆಂದು ಪ್ರಕಟಿಸಿದ್ದಾರೆ.
ಇಂದು 63 ನೇ ವಸಂತಕ್ಕೆ ಕಾಲಿಟ್ಟ ಕಮಲ್ ಹಾಸನ್ ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ತಡವಾಗಿ ರಾಜಕೀಯ ಪ್ರವೇಶಿಸಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ. ಮೊದಲ ಹಂತವಾಗಿ ಮೊಬೈಲ್ ಆಪ್ ಹಾಗೂ ಟ್ವಿಟರ್ ಖಾತೆಗೆ ಚಾಲನೆ ನೀಡಿದ ಕಮಲ್ ಹಾಸನ್, ಪಕ್ಷದ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ. ಆಪ್ ಬಿಡುಗಡೆ ಒಂದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ತಮಿಳುನಾಡಿನಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Comments