ಸದಾನಂದ ಗೌಡ್ರು ಮಾಂಸಾಹಾರ ತ್ಯಜಿಸಿರೋದೇಕೆ ?
ರಾಜ್ಯ ರಾಜಕಾರಣಕ್ಕೆ ಮರಳಿರುವ ಮಾಜಿ ಮುಖ್ಯ ಮಂತ್ರಿ ಡಿವಿಎಸ್ ಅವರು ರಾಜ್ಯದಲ್ಲಿ ಮುಂದೆ ನಡೆಯಲಿರುವ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು, ಹೆಚ್ಚು ಸಕ್ರಿಯವಾಗಿರಲು ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರದ ಮೊರೆ ಹೋಗಿದ್ದಾರೆ.
ಡಿ.ವಿ.ಸದಾನಂದ ಗೌಡ ಅವರು ಇನ್ನು ಮಾಂಸಹಾರ ಸೇವಿಸುವುದಿಲ್ಲವಂತೆ. ಅವರು ಸೋಮವಾರದಿಂದ ಮಾಂಸಾಹಾರ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಈ ವಿಚಾರವನ್ನು ಸ್ವತ: ಡಿ.ವಿ.ಸದಾನಂದ ಗೌಡ ಬಹಿರಂಗಪಡಿಸಿದ್ದಾರೆ. ಡಿ.ವಿ.ಸದಾನಂದ ಗೌಡ ಅವರು ಕಳೆದ ನಾಲ್ಕೂವರೆ ದಶಕಗಳಿಂದಲೂ ದಿನನಿತ್ಯ ಮಾಂಸಾಹಾರದ ಊಟ ಸೇವಿಸುತ್ತಿದ್ದರು. ಕಳೆದ ಎರಡು ತಿಂಗಳುಗಳ ಹಿಂದೆ ಮಾಂಸಾಹಾರವನ್ನು ನಿಲ್ಲಿಸುವ ನಿಟ್ಟಿನಲ್ಲಿ ಡಿವಿಎಸ್ ಯೋಚಿಸಿದ್ದರು. ಅಂದಿನಿಂದ ಮಾಂಸಾಹಾರ ಸೇವಿಸುವುದನ್ನು ಕಡಿಮೆ ಮಾಡಿದ ಡಿವಿಎಸ್ ಇದೀಗ ಸಂಪೂರ್ಣವಾಗಿ ತ್ಯಜಿಸಿದ್ದಾರೆಂದು ತಿಳಿದು ಬಂದಿದೆ.
Comments