ಹೈಕಮಾಂಡ್ ಬಯಸಿದರೆ ಚನ್ನಪಟ್ಟಣದಿಂದ ಕಣಕ್ಕೆ ಎಂದ ಡಿಕೆಸು

07 Nov 2017 9:49 AM | Politics
307 Report

ಹೈಕಮಾಂಡ್ ಬಯಸಿದರೆ ತಾನು ಚೆನ್ನಪಟ್ಟಣದಿಂದ ಮುಂದಿನ ಚುನಾವಣೆಗೆ ಅಭ್ಯರ್ಥಿಯಾಗಲು ಸಿದ್ಧ ಎಂದು ಸಂಸದ ಡಿ.ಕೆ. ಸುರೇಶ್ ಪ್ರಕಟಿಸಿದ್ದಾರೆ.

ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಇಲ್ಲಿಂದ ಸ್ಪರ್ಧಿಸಲಿ ಎಂಬ ಶಾಸಕ ಯೋಗೇಶ್ವರ್ ಅವರ ಸವಾಲಿಗೆ ತಮ್ಮ ಕಾರ್ಯಕರ್ತರೇ ಉತ್ತರ ನೀಡುತ್ತಾರೆ ಎಂದರು. ಯೋಗೇಶ್ವರ್ ಅವರಿಗೆ ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆ ತಕ್ಕ ಪಾಠ ಕಲಿಸುತ್ತದೆ. ನಾನು ಮತ್ತು ನನ್ನ ಸಹೋದರ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಬದ್ಧವಾಗಿದ್ದೇವೆ. ಪಕ್ಷದ ತೀರ್ಮಾನವನ್ನು ನಾವು ಪಾಲಿಸುತ್ತೇವೆ ಎಂದು ತಿಳಿಸಿದರು.

Edited By

Shruthi G

Reported By

Shruthi G

Comments