ಚುನಾವಣೆ ಕಣಕ್ಕಿಳಿಯುವ ಸ್ಯಾಂಡಲ್ ವುಡ್ ನಟಿಯರು ಯಾರ್ಯಾರು ?



ನಟ ಉಪೇಂದ್ರ ತಮ್ಮ ಪ್ರಜಾಕೀಯ ಎಂಬ ಆಲೋಚನೆಯಿಂದ ಹೊಸ ಪಕ್ಷ ಸೃಷ್ಟಿ ಮಾಡಿದ್ದಾರೆ. ನಟಿ ಅಮೂಲ್ಯ ಕೂಡ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದರೊಂದಿಗೆ ಸ್ಯಾಂಡಲ್ ವುಡ್ ನ ಅನೇಕರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ತಯಾರಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ರಾಜಕೀಯ ರಂಗ ಪ್ರವೇಶಿಸಿದ ಕನ್ನಡದ ನಟಿಮಣಿಯರ ಪಟ್ಟಿ ಇಲ್ಲಿದೆ.
ಸ್ಯಾಂಡಲ್ ವುಡ್ ಕ್ವೀನ್ ಆಗಿದ್ದ ನಟಿ ರಮ್ಯಾ ಸದ್ಯ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿದ್ದಾರೆ. ಸಿನಿಮಾ ಬಿಟ್ಟು 2012 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ರಮ್ಯಾ ಮಂಡ್ಯ ಕ್ಷೇತ್ರದಿಂದ ಎಂ.ಪಿ ಕೂಡ ಆಗಿದ್ದರು. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ನಟಿ ತಾರಾ ಈಗ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ. 2009 ರಲ್ಲಿ ಭಾರತೀಯ ಜನತಾ ಪಾರ್ಟಿ ಸೇರಿದ ತಾರಾ ವಿಧಾನ ಪರಿಷತ್ ಸದಸ್ಯ ಆಗಿದ್ದಾರೆ. ಮಳೆ ಹುಡುಗಿ ಪೂಜಾ ಗಾಂಧಿ ಕೂಡ ರಾಜಕೀಯ ಅಖಾಡಕ್ಕೆ ಇಳಿದಿದ್ದರು. ಮೊದಲು ಜಾತ್ಯಾತೀತ ಜನತಾದಳ, ನಂತರ ಕೆ.ಜೆ.ಪಿ ಕೊನೆಗೆ ಬಿ.ಎಸ್.ಆರ್ ಅಂತ ಪಕ್ಷದಿಂದ ಪಕ್ಷಕ್ಕೆ ಹಾರಿದ ಪೂಜಾ ಸದ್ಯ ರಾಜಕೀಯ ಮತ್ತು ಸಿನಿಮಾ ಎರಡನ್ನೂ ನಿಭಾಯಿಸುತ್ತಿದ್ದಾರೆ. ಕನ್ನಡದಲ್ಲಿ 400ಕ್ಕೂ ಹೆಚ್ಚು ಸಿನಿಮಾ ಮಾಡಿರುವ ನಟಿ ಉಮಾಶ್ರೀ ಈಗ ರಾಜ್ಯ ಸರ್ಕಾರದ ಸಚಿವೆ ಆಗಿದ್ದಾರೆ. 2013 ರಲ್ಲಿ ರಾಜಕೀಯ ಪ್ರವೇಶಿಸಿದ ಉಮಾಶ್ರೀ ಈಗ ಸಿದ್ಧರಾಮಯ್ಯ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿದ್ದಾರೆ. ಕ್ರೇಜಿ ಕ್ವೀನ್ ರಕ್ಷಿತಾ ಬಿ.ಎಸ್.ಆರ್ ಪಕ್ಷದ ಮೂಲಕ 2012ರಲ್ಲಿ ತಮ್ಮ ರಾಜಕೀಯ ಜೀವನ ಶುರು ಮಾಡಿದರು.
ಬಳಿಕ ಜಾತ್ಯಾತೀತ ಜನತಾದಳಕ್ಕೆ ಬಂದ ರಕ್ಷಿತಾ ಸದ್ಯ ಬಿ.ಜೆ.ಪಿ ಪಕ್ಷದ ಮೂಲಕ ಗುರುತಿಸಿಕೊಂಡಿದ್ದಾರೆ. ನಟಿ ಶೃತಿ ಸದ್ಯ ಭಾರತೀಯ ಜನತಾ ಪಾರ್ಟಿಯ ಮಹಿಳಾ ವಿಭಾಗದ ಮುಖ್ಯ ಕಾರ್ಯದರ್ಶಿ ಆಗಿದ್ದಾರೆ. ಮೊದಲು ಬಿ.ಜಿ.ಪಿ ಪಕ್ಷದಲ್ಲಿ ಇದ್ದ ಶೃತಿ ಬಳಿಕ ಯಡಿಯೂರಪ್ಪ ಅವರ ಕೆ.ಜೆ.ಪಿ ಪಕ್ಷ ಸೇರಿಕೊಂಡರು. ಆದರೆ ಆ ನಂತರ ಕೆ.ಜೆ.ಪಿ ಪಕ್ಷ ಕೂಡ ಬಿ.ಜೆ.ಪಿ ಪಕ್ಷದಲ್ಲಿ ವಿಲೀನವಾಯಿತು. ನಟ ಗಣೇಶ್ ಪತ್ನಿ ನಿರ್ಮಾಪಕಿ ಶಿಲ್ಪಾ ಗಣೇಶ್ ಸದ್ಯ ಬಿಜೆಪಿ ಪಕ್ಷದ ಮೂಲಕ ಗುರುತಿಸಿಕೊಂಡಿದ್ದಾರೆ. ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಶಿಲ್ಪಾ ಗಣೇಶ್ ಬಿಜೆಪಿ ಪಕ್ಷ ಸೇರಿದರು.1999ರಲ್ಲಿ ಸುಷ್ಮಾ ಸ್ವರಾಜ್ ಅವರ ಪರವಾಗಿ ಬಳ್ಳಾರಿಯಲ್ಲಿ ರಾಜಕೀಯ ಪ್ರಚಾರದಲ್ಲಿ ಭಾಗಿಯಾಗಿದ್ದ ನಟಿ ಮಾಳವಿಕಾ ಬಳಿಕ ಬಿ.ಜೆ.ಪಿ ಪಕ್ಷದ ಮೂಲಕವೇ ತಮ್ಮ ಪೊಲಿಟಿಕಲ್ ಜರ್ನಿ ಶುರು ಮಾಡಿದರು. ದೊಡ್ಮನೆಯ ಹಿರಿಯ ಸೊಸೆ ಗೀತಾ ಶಿವರಾಜ್ ಕುಮಾರ್ ಕಳೆದ ಬಾರಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದರು. ಅತ್ತ ತಂದೆ ಬಂಗಾರಪ್ಪ ನವರ ಪ್ರಭಾವ, ಇತ್ತ ರಾಜ್ ಕುಮಾರ್ ಹೆಸರು ಇದ್ದರೂ ಗೀತಾ ಶಿವರಾಜ್ ಕುಮಾರ್ ಅವರಿಗೆ ಗೆಲುವು ದಕ್ಕಲಿಲ್ಲ.
Comments