ಐ.ಟಿ ವಿಚಾರಣೆಗೆ ಕುಟುಂಬ ಸದಸ್ಯರೊಟ್ಟಿಗೆ ಶಿವಕುಮಾರ್ ಹಾಜರು
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಗೆ ಕುಟುಂಬ ಸದಸ್ಯರೊಟ್ಟಿಗೆ ಶಿವಕುಮಾರ್ ಹಾಜರಾದರು. ಆಗಸ್ಟ್ 2ರಂದು ಆದಾಯ ತೆರಿಗೆ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಮತ್ತವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಸುಮಾರು 300 ಕೋಟಿಗೂ ಹೆಚ್ಚು ಅಘೋಷಿತ ಆಸ್ತಿ ಇರುವುದನ್ನು ಪತ್ತೆ ಹಚ್ಚಿದ್ದರು.
ಐ.ಟಿ. ವಿಚಾರಣೆಗೆ ಕುಟುಂಬ ಸದಸ್ಯರೊಂದಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಹಾಜರಾದರು. ತಾಯಿ ಗೌರಮ್ಮ, ಪತ್ನಿ ಉಷಾ, ಮಗಳು ಐಶ್ವರ್ಯ ಅವರ ಜತೆ ಶಿವಕುಮಾರ್ ಹಾಜರಾದರು. ಕುಟುಂಬ ಸದಸ್ಯರ ಹೆಸರಿನಲ್ಲಿ ವಿವಿಧೆಡೆ ಆಸ್ತಿ ಇರುವ ದಾಖಲೆಗಳು ದೊರೆತಿರುವ ಕಾರಣ ತಾಯಿ, ಪತ್ನಿ ಮತ್ತು ಮಗಳನ್ನೂ ಐ.ಟಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ.
Comments