ಜೆಡಿಎಸ್ ವಿಕಾಸ ಯಾತ್ರೆ ಯಶಸ್ವಿ ಆಗಲೆಂದು ದೇವೇಗೌಡರಿಂದ ಹೋಮ

06 Nov 2017 1:59 PM | Politics
819 Report

ಜೆ.ಡಿ.ಎಸ್ ನ ವಿಕಾಸ ಯಾತ್ರೆಗೆ ಇನ್ನು ಒಂದು ದಿನ ಇರುವಂತೆ ತಮ್ಮ ಹುಟ್ಟೂರು ಹಾಸನದ ಹರದನಹಳ್ಳಿಯಲ್ಲಿ ಹೋಮ ನಡೆಸುತ್ತಿರುವ ದೇವೇಗೌಡ ಅವರು ಯಾತ್ರೆಗೆ ಯಾವುದೇ ಅಡ್ದಿ ಆತಂಕ ಎದುರಾಗದೆ ಯಾತ್ರೆ ಯಶಸ್ವಿ ಆಗಲೆಂದು ಪ್ರಾರ್ಥಿಸುತ್ತಿದ್ದಾರೆ.

ನವೆಂಬರ್ 6 : ಜೆ.ಡಿ.ಎಸ್ ಅನ್ನು ಅಧಿಕಾರಕ್ಕೆ ತರಲೇ ಬೇಕೆಂದು ಶತಾಯಗಥಾಯ ಶ್ರಮಿಸುತ್ತಿರುವ ಜೆ.ಡಿ.ಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಪಕ್ಷಕ್ಕೆ ಆಶೀರ್ವಾದ ಬೇಡಿ ಇದೀಗ ದೇವರ ಮೊರೆ ಹೋಗಿದ್ದಾರೆ. ಹೋಮದಲ್ಲಿ ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ, ಮಗ ರೇವಣ್ಣ, ಭವಾನಿ ರೇವಣ್ಣ, ಮೊಮ್ಮಗ ಡಾ.ಸೂರಜ್ ಅವರು ಪಾಲ್ಗೊಂಡಿದ್ದು, ಕುಮಾರಸ್ವಾಮಿ ಅವರ ಕುಟುಂಬವೂ ಹೋಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸ್ವಗೃಹದಲ್ಲಿ ಹೋಮ ಮುಗಿಸಿದ ನಂತರ ಕುಟುಂಬ ಸದಸ್ಯರೆಲ್ಲರೂ ಸಂಜೆ ನಂಜನಗೂಡಿಗೆ ತೆರಳಿ ಶ್ರೀಕಂಠೇಶ್ವರನಿಗೆ ಪೂಜೆ ಸಲ್ಲಿಸಿ ದರ್ಶನ ಮಾಡಲಿದ್ದಾರೆ.



Edited By

Hema Latha

Reported By

Madhu shree

Comments