ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಅಮೂಲ್ಯ ..?

ಸ್ಯಾಂಡಲ್‍ವುಡ್ ನಟಿ ಅಮೂಲ್ಯ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಇದನ್ನು ಸುಲಭವಾಗಿ ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಅಮೂಲ್ಯರ ಮಾವ ರಾಮಚಂದ್ರ , ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಬರುತ್ತಿದೆ. ಅದಕ್ಕೆ ಈಗಾಗಲೇ ರಾಜಕೀಯ ಚಟುವಟಿಕೆ ಶುರುವಾಗಿದೆ. ಈಗಾಗಲೇ ನಟ ಉಪೇಂದ್ರ ಹಾಗೂ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೊಸ ರಾಜಕೀಯ ಪಕ್ಷ ಕಟ್ಟಿದ್ದಾರೆ. ಇದೇ ವೇಳೆ ಮತ್ತೊಂದು ಸುದ್ದಿಯೊಂದು ಬಂದಿದೆ. ಬೆಂಗಳೂರಿನ ಆರ್.ಆರ್. ನಗರದ ಬಿಜೆಪಿಯ ಪ್ರಬಲ ನಾಯಕರು ಕೂಡಾ ಹೌದು. ಹೀಗಾಗಿ ಅಪ್ಪನ ಹಾದಿಯಲ್ಲಿರುವ ಅಮೂಲ್ಯ ಪತಿ ಜಗದೀಶ್ ಗೂ ಪತ್ನಿ ಅಮೂಲ್ಯ ಸಾಥ್ ನೀಡುತ್ತಿದ್ದಾರೆ. ಜಗದೀಶ್ ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಇದ್ದಕ್ಕೆ ಅಮೂಲ್ಯ ಕೂಡಾ ಜೊತೆಯಾಗುತ್ತಿದ್ದಾರೆ.
Comments