ಜೆಡಿಎಸ್ ಪ್ರಚಾರ ಯಾತ್ರೆ ಪ್ರಚಾರ ಕಾರ್ಯ ಆರಂಭ

ನ.6-ಚುನಾವಣೆ ಪ್ರಚಾರಕ್ಕಾಗಿ ಹೈಟೆಕ್ ಬಸ್ನಲ್ಲಿ ರಾಜ್ಯ ಪ್ರವಾಸ ಆರಂಭಿಸಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹರದನಹಳ್ಳಿ, ಹೊಳೆ ನರಸೀಪುರ, ನಂಜನಗೂಡಿಗೆ ಭೇಟಿ ನೀಡಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
ನ.8- ಮುಗುಳವಳ್ಳಿ, ಮೂಡಗೆರೆ ಹಾಗೂ ತರಿಕೆರೆಗೆ ಭೇಟಿ ನೀಡಲಿದ್ದಾರೆ. ತರಿಕೆರೆಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಭಾಷಣ ಮಾಡುವರು. ತರುವಾಯ ಶಿವಮೊಗ್ಗದಲ್ಲಿ ಏರ್ಪಡಿಸಿರುವ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಸಂಜೆ ಶಿವಮೊಗ್ಗ ಗ್ರಾಮಾಂತರ ತಾಲೂಕು, ಬುಳ್ಳಾಪುರಕ್ಕೆ ಆಗಮಿಸಿ ಬುಳ್ಳಾಪುರದ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ರಾತ್ರಿ ರೈತ ಕರಿಬಸಪ್ಪ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವರು. ನ.9- ಬುಳ್ಳಾಪುರದಿಂದ ದಾವಣಗೆರೆ ಜಿಲ್ಲೆ ಚನ್ನಗಿರಿಗೆ ಭೇಟಿ ನೀಡಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಂತರ ಹರಿಹರದಲ್ಲಿ ನಡೆಯುವ ಸಮಾವೇಶದ ಉದ್ಘಾಟಿಸಿ ಭಾಷಣ ಮಾಡುವರು. ತರುವಾಯ ರಸ್ತೆ ಮಾರ್ಗದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ನ.7 ರಂದá- ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ, ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರಸುಂದರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ರಿಂಗ್ ರಸ್ತೆಯಲ್ಲಿ ಹೊಸಹುಂಡಿ- ಬಂಡಿಪಾಳ್ಯ- ಶ್ರೀರಾಂಪುರ- ಕೆಇಬಿ ಜಂಕ್ಷನ್ – ಬೋಗಾದಿ ಜಂಕ್ಷನ್ ಮೂಲಕ ವಿಶೇಷ ವಾಹನ ವಿಜಯನಗರ 3ನೇ ಹಂತದಲ್ಲಿರá-ವ ಐಶ್ವರ್ಯ ಪೆಟ್ರೋಲ್ ಬಂಕ್ ಸರ್ಕಲ್ ತಲುಪಲಿದೆ ಎಂದರು. ನಂತರ 1001 ಮಹಿಳೆಯರ ಪೂರ್ಣಕುಂಭ ಸ್ವಾಗತ, 101 ಎತ್ತಿನಗಾಡಿಗಳು, 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ನಾನಾ ಕಲಾತಂಡಗಳು, ಬೈಕ್ಗಳ ಮೂಲಕ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
Comments