ಡಿ.ಕೆ ಶಿವಕುಮಾರ್ ಗೆ ಐಟಿ ನೊಟೀಸ್

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣ ಹಿನ್ನಲೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಐಟಿ ನೊಟೀಸ್ ನೀಡಿದ್ದು, ಇಡೀ ಕುಟುಂಬ ಹಾಜರಾಗುವಂತೆ ನೊಟೀಸ್ ನಲ್ಲಿ ತಿಳಿಸಲಾಗಿದೆ.
ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣ ಹಿನ್ನಲೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಐಟಿ ನೊಟೀಸ್ ನೀಡಿದ್ದು, ಇಡೀ ಕುಟುಂಬ ಹಾಜರಾಗುವಂತೆ ನೊಟೀಸ್ ನಲ್ಲಿ ತಿಳಿಸಲಾಗಿದೆ.ಈ ಹಿಂದೆ ಡಿಕೆಶಿ 6 ತೆರಿಗೆ ಇಲಾಖೆ ಕಚೇರಿಗೆ ಹಾಜರಾಗಿದ್ದರು. ಇನ್ನು ನಾಳೆ 7ನೇ ಬಾರಿ ವಿಚಾರಣೆಗೆ ಹಾಜರಾಗಬೇಕಿದೆ.
ವಿಚಾರಣೆ ವೇಳೆ ಡಿಕೆಶಿ ಅವರು ಹೆಂಡತಿ, ತಾಯಿ ಮತ್ತು ಮಕ್ಕಳನ್ನು ಕರೆದುಕೊಂಡು ಖುದ್ದು ಹಾಜರಾಗಬೇಕೆಂದು ನೊಟೀಸ್ ನಲ್ಲಿ ಹೇಳಲಾಗಿದೆ. ದೇಶದ ಕಾನೂನಿಗೆ ಗೌರವ ನೀಡುತ್ತೇನೆ ಎಲ್ಲಾ ರೀತಿಯ ವಿಚಾರಣೆಗೆ ಸಹಕಾರ ನೀಡುತ್ತೇನೆ , ಯಾವ ರೀತಿಯ ಸಮಸ್ಯೆ ಬರುತ್ತದೆಯೋ ಬರಲಿ ಎಂದು ಡಿಕೆಶಿ ಹೇಳಿದ್ದಾರೆ ಎನ್ನಲಾಗಿದೆ.
Comments