ವಸ್ತುಗಳ ಬೆಲೆ ಏರಿಕೆ, ರೇಷನ್, ಗ್ಯಾಸ್ ಬೆಲೆ ಹೆಚ್ಚಳ, 'ಮೋದಿ ಜೀ ನಿಮ್ಮ ಹಾಸ್ಯಾಸ್ಪದ ಭಾಷಣ ನಿಲ್ಲಿಸಿ' - ರಾಹುಲ್ ಗಾಂಧಿ

ನವದೆಹಲಿ: ಗುಜುರಾತ ಹಾಗೂ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಈ ಸಮಯವನ್ನು ಉಪಯೋಗಿಸಿಕೊಳ್ಳುತ್ತಿದೆ.
ನವದೆಹಲಿ: ಗುಜುರಾತ ಹಾಗೂ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಈ ಸಮಯವನ್ನು ಉಪಯೋಗಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ನಡೆಯುವ ರಾಜ್ಯಗಳಲ್ಲಿ ರ್ಯಾಂಲಿ ಕೈಗೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಈ ಬಾರಿ ರಾಹುಲ್ ಗಾಂಧಿ ಹೆಚ್ಚುತ್ತಿರುವ ಬೆಲೆ ಏರಿಕೆ ಬಗ್ಗೆ ವಾಕ್ ಪ್ರಹಾರ ನಡೆಸಿದ್ದಾರೆ.
ರಾಹುಲ್ ಗಾಂಧಿ ಅವರ ಅಧಿಕೃತ ಟ್ವಿಟರ್ ವೆಬ್ ಸೈಟ್ ನಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ಪ್ರಸ್ತಾಪ ಮಾಡಲಾಗಿದೆ. ರಾಹುಲ್ ಗಾಂಧಿ ವೆಬ್ ಸೈಟ್ ವೊಂದರ ವರದಿಯನ್ನು ಶೇರ್ ಮಾಡಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಗ್ಯಾಸ, ರೇಷನ್ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಇವಾಗಲಾದ್ರು ಮೋದಿ ಅವರು ಹಾಸ್ಯಾಸ್ಪದ ಭಾಷಣ ನಿಲ್ಲಿಸಿ, ಕೇಂದ್ರ ಸರ್ಕಾರ ಜನರಿಗೆ ಉದ್ಯೋಗ ನಿಡಲಿ, ಇಲ್ಲದಿದ್ದರೆ ಸಿಂಹಾಸನ ಖಾಲಿ ಮಾಡಿ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಬಿಜೆಪಿ ವಿರುದ್ಧ ಟ್ವಿಟರ್ ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಮೊದಲು ವೆಬ್ ಸೈಟ್ ನಲ್ಲಿ ಪ್ರಕಟವಾದ ವರದಿಯನ್ನು ಶೇರ್ ಮಾಡಿ ಕೆಲ ದಿನಗಳ ಹಿಂದೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೌನವನ್ನು ಪ್ರಶ್ನಿಸಿದ್ದರು, ' ಮೋದಿ ಜೀ, ಶಾ ತಿಂದಿದ್ದು ಹೆಚ್ಚಾಗಿದೆ. ನೀವು ಕಾವಲುದಾರರಾಗಿದ್ದೀರಾ ಅಥವಾ ಪಾಲುದಾರರಾಗಿದ್ದೀರಾ? ಏನನ್ನಾದರೂ ಹೇಳಿ ಎಂದು ರಾಹುಲ್ ಪ್ರಶ್ನಿಸಿದ್ದರು.
Comments