ತಮಿಳುನಾಡು ರಾಜಕೀಯದಲ್ಲಿ ನಟಿ ರೇಖಾರನ್ನು ಮುಂದಾಳತ್ವ ವಹಿಸಲಿದ್ದೇಯಾ ಕಾಂಗ್ರೆಸ್?
ನವದೆಹಲಿ : ರಾಜ್ಯಸಭಾ ಕಲಾಪದಲ್ಲಿ ಸದಾ ಹಾಜರಾಗದೇ ತೀವ್ರ ಟೀಕೆಗೆ ಒಳಗಾಗಿರುವ ಬಾಲಿವುಡ್ ನಟಿ ರೇಖಾ ರಾಜ್ಯಸಭಾ ಯಾವುದೇ ಕಾರ್ಯಕ್ರಮದಲ್ಲಿ , ಚರ್ಚೆಗಳಲ್ಲಿ ಅವರು ಭಾಗವಹಿಸುವುದಿಲ್ಲ ಎಂಬ ಆರೋಪ ವಿದೆ.
ನವದೆಹಲಿ : ರಾಜ್ಯಸಭಾ ಕಲಾಪದಲ್ಲಿ ಸದಾ ಹಾಜರಾಗದೇ ತೀವ್ರ ಟೀಕೆಗೆ ಒಳಗಾಗಿರುವ ಬಾಲಿವುಡ್ ನಟಿ ರೇಖಾ ರಾಜ್ಯಸಭಾ ಯಾವುದೇ ಕಾರ್ಯಕ್ರಮದಲ್ಲಿ , ಚರ್ಚೆಗಳಲ್ಲಿ ಅವರು ಭಾಗವಹಿಸುವುದಿಲ್ಲ ಎಂಬ ಆರೋಪ ವಿದೆ. ಇತ್ತೀಚೆಗೆ ರೇಖಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಂಸದೀಯ ಕ್ಷೇತ್ರ ರಾಯಬರೇಲಿ ಅಭಿವೃದ್ಧಿಗಾಗಿ ಸಂಸದರ ನಿಧಿ ಇಂದ 2 ಕೋಟಿ ರೂಪಾಯಿ ನೀಡಿ ಏಕಾಏಕಿ ನಟಿ ರೇಖಾ ಚರ್ಚೆಗೆ ಗ್ರಾಸವಾದರು.
ಸದ್ಯ ಕಾಂಗ್ರೆಸ್ ನಿಂದ ತಮಿಳುನಾಡು ರಾಜಕೀಯದಲ್ಲಿ ರೇಖಾ ಸಕ್ರೀಯರಾಗಲಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಮುಖ್ಯವಾಗಿ ಹೇಳುವುದಾದರೆ ತಮಿಳುನಾಡಿನ ರಾಜಕೀಯ ಹಿಂದಿನಿಂದಲು ಚಿತ್ರರಂಗದ ಜತೆಗ ಸಂಬಂಧ ಹೊಂದಿದೆ. ಇಲ್ಲಿ ಇಡೀ ರಾಜಕೀಯ ಚಿತ್ರರಗಂದ ಸುತ್ತ ಸುತ್ತುತ್ತದೆ. ಅದು ತಮಿಳುನಾಡಿನ ಡಿಎಂಕೆ ಕರುಣಾನಿಧಿ , ಅಥವಾ ಎಐಎಮ್ ಎಂಕೆ ಕೆ. ರಾಮಚಂದ್ರನ್ ಅಥವಾ ಜಯಲಲಿತಾ ಆಗಿರಲಿ ಸಿನಿಮಾ ಕ್ಷೇತ್ರದಿಂದ ಹಿಡಿದು ರಾಜಕೀಯ ಜತೆಗೆ ಸಂಬಂಧ ಹೊಂದಿದ್ದಾರೆ. ಇಲ್ಲಿನ ಜನರು ಕೂಡ ಅಷ್ಟೇ ಚಿತ್ರರಂಗದಿಂದ ಬಂದು ರಾಜಕೀಯಕ್ಕೆ ಎಂಟ್ರಿ ನೀಡಿದ ಹಲವು ನಾಯಕರನ್ನು ಆಶೀರ್ವದಿಸಿದ್ದಾರೆ, ಸ್ವಾಗತಿಸಿದ್ದಾರೆ. ವೋಟ್ ಹಾಕಿ ಮುಖ್ಯಮಂತ್ರಿಯನ್ನಾಗಿ ಮಾಡಿರುವ ಹಲವು ಉದಾಹರಣೆಗಳು ನಮ್ಮಲ್ಲಿವೆ. ಹಾಗಾಗಿ ಸದ್ಯ ಬಾಲಿವುಡ್ ನಟಿ, ಸಂಸದೆ ರೇಖಾ ಅವರನ್ನು ತಮಿಳುನಾಡಿನ ರಾಜಕೀಯದಲ್ಲಿ ಸಕ್ರೀಯಗೊಳಿಸಲು , ಮುಂದಾಳತ್ವ ವಹಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಒಂದು ವೇಳೆ ನಿಜ ಆದ್ರೆ ತಮಿಳುಗರ ಮನಸ್ಸನ್ನು ಗೆಲ್ಲುವಲ್ಲಿ ನಟಿ ರೇಖಾ ಸಫಲರಾಗ್ತಾರಾ ಎಂಬುದನ್ನು ಕಾದು ನೋಡ್ಬೇಕು.
Comments