ಅಭಿವೃದ್ಧಿ ಕಾಮಗಾರಿಗಳತ್ತ ಗಮನ ನೀಡುತ್ತಿರುವ ಜೆಡಿಎಸ್ ಮುಖಂಡರು
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಕೆಲಸದ ಒತ್ತಡ ಹಾಗೂ ಅನಾರೋಗ್ಯದ ನಡುವೆಯೇ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೋಟ್ಯಂತರ ರೂ. ಹಣ ಬಿಡುಗಡೆ ಮಾಡಿಸಿದ್ದಾರೆ ಎಂದರು.
ಶಾಸಕ ಹೆಚ್.ಡಿ.ಕುಮಾರಸ್ವಾಮಿ ಅವರ ಅನುದಾನ ಮತ್ತು ನಮ್ಮ ರಸ್ತೆ - ನಮ್ಮ ಗ್ರಾಮ ಯೋಜನೆಯ ನಾಲ್ಕನೇ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜೆಡಿಎಸ್ ಮುಖಂಡರು ಭೂಮಿ ಪೂಜೆ ನೆರವೇರಿಸಲಾಯಿತು. ನಾಲ್ಕು ವರ್ಷಗಳಲ್ಲಿ ಎರಡು ಹೋಬಳಿಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೂ ಜನರ ಬಳಿ ಬರಲು ಸಮಯವಿಲ್ಲದ ಕಾರಣ ಕಾಮಗಾರಿಗಳಿಗೆ ಅಧಿಕಾರಿಗಳಿಂದ ಮತ್ತು ಕ್ಷೇತ್ರದ ಮುಖಂಡರಿಂದ ಅಭಿವೃದ್ಧಿಪಡಿಸಲು ಸೂಚನೆ ನೀಡಿದ್ದಾರೆ. ಶೀಘ್ರದಲ್ಲಿಯೇ ಜನರ ಬಳಿ ಬಂದು ತಾವು ಹಮ್ಮಿಕೊಂಡಿರುವ ಅಭಿವೃದ್ಧಿಗಳ ಬಗ್ಗೆ ತಿಳಿಸಲಿದ್ದಾರೆ ಎಂದರು.
ಹನುಮಂತಪುರದಿಂದ ಭೈರೇಗೌಡನದೊಡ್ಡಿಯ 1.5 ಕಿಮೀ ಉದ್ದದ ರಸ್ತೆಗೆ 96 ಲಕ್ಷ, ಕೆಂಕೇರಿಪಾಳ್ಯದಿಂದ ಚಿಕ್ಕಮರಳವಾಡಿ ಮುಖ್ಯರಸ್ತೆಯ 0.7 ಕಿಮೀಗೆ 44 ಲಕ್ಷ, ತಟ್ಟೆಕೆರೆಯಿಂದ ಇರುಳಿಗರ ಕಾಲೋನಿಯ 1.5 ಕಿ.ಮೀ ಡಾಂಬರೀಕರಣ ರಸ್ತೆಗೆ 95 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಇನ್ನೂ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು. ಮರಳವಾಡಿ ಜಿಪಂ ಸದಸ್ಯ ಎಂ.ಎನ್.ನಾಗರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಪ್ರಗತಿಗಾಗಿ ಸರ್ಕಾರ ಜಾರಿಗೊಳಿಸುತ್ತಿರುವ ಯೋಜನೆಗಳನ್ನು ಸದುಪಯೋಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಗ್ರಾಮಾಂತರ ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು. ತಾಪಂ ಸದಸ್ಯೆ ಕಲಾವತಿ, ಗ್ರಾಪಂ ಅಧ್ಯಕ್ಷೆ ತಾಸ್ಮಿನ್‌ತಾಜ್, ಗ್ರಾಪಂ ಮಾಜಿ ಅಧ್ಯಕ್ಷ ಭೈರೇಗೌಡ, ಅಧ್ಯಕ್ಷ ತಮ್ಮಯ್ಯಣ್ಣ, ಶಿವನಯ್ಯ, ಎಂ.ವಿ.ಕೃಷ್ಣಮೂರ್ತಿ, ಸದಸ್ಯರಾದ ಪದ್ಮಾವತಿ, ನಾರಾಯಣ್, ತಾಜ್, ಲಕ್ಷ್ಮೀಬಾಯಿ, ಬನವಾಸಿ ಪಂಚಾಯತಿ ರಾಜೇಂದ್ರರಾವ್, ಇರುಳಿಗರ ಕಾಲೋನಿ ಮುಖಂಡ ಮಲ್ಲೇಶ್, ರಂಗಣ್ಣ, ರಾಜಪ್ಪ, ಮಾರೇಗೌಡ, ತಟ್ಟೇಕೆರೆ ಶಿವಣ್ಣ ಹಲವರು ಭಾಗವಹಿಸಿದ್ದರು.
Comments