ಉಪೇಂದ್ರ ವಿರುದ್ಧ ಮತ್ತೆರೆಡು ದೂರುಗಳು ದಾಖಲು

04 Nov 2017 12:33 PM | Politics
475 Report

ಗಾಂಧಿ ಅವರ ಮೌಲ್ಯಗಳು, ವಿಚಾರಧಾರೆಯ ಪ್ರಚಾರಕ್ಕೆ ಮತ್ತು ವಿಚಾರಣೆ ಸಂಕಿರಣ ಕಾರ್ಯಕ್ರಮಗಳಿಗೆ ಮಾತ್ರ ಗಾಂಧಿ ಭವನವನ್ನು ಬಾಡಿಗೆಗೆ ನೀಡಬೇಕು. ಆದರೆ ಇಲ್ಲಿನ ಸಿಬ್ಬಂದಿ ಗಾಂಧಿ ಭವನದ ನಿಯಮ ಮೀರಿ ರಾಜಕೀಯ ಪಕ್ಷದ ಉದ್ಘಾಟನೆಗೆ ಗಾಂಧಿ ಭವನವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಹೈಕೋರ್ಟ್ ವಕೀಲ ಅಮೃತೇಶ್ ದೂರು ನೀಡಿದ್ದಾರೆ.

ನಟ ಉಪೇಂದ್ರ ಅವರು ತಮ್ಮಪಕ್ಷದ ಉದ್ಘಾಟನೆಯನ್ನು ಗಾಂಧಿ ಭವನದಲ್ಲಿ ನೆರವೇರಿಸಿದ್ದು, ಈಗ ವಿವಾದಕ್ಕೆ ಕಾರಣವಾಗಿದ್ದು, ಮತ್ತೆರೆಡು ದೂರುಗಳು ದಾಖಲಾಗಿವೆ. ಗಾಂಧಿ ಅವರ ಮೌಲ್ಯಗಳು, ವಿಚಾರಧಾರೆಯ ಪ್ರಚಾರಕ್ಕೆ ಮತ್ತು ವಿಚಾರಣೆ ಸಂಕಿರಣ ಕಾರ್ಯಕ್ರಮಗಳಿಗೆ ಮಾತ್ರ ಗಾಂಧಿ ಭವನವನ್ನು ಬಾಡಿಗೆಗೆ ನೀಡಬೇಕು. ಆದರೆ ಇಲ್ಲಿನ ಸಿಬ್ಬಂದಿ ಗಾಂಧಿ ಭವನದ ನಿಯಮ ಮೀರಿ ರಾಜಕೀಯ ಪಕ್ಷದ ಉದ್ಘಾಟನೆಗೆ ಗಾಂಧಿ ಭವನವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಹೈಕೋರ್ಟ್ ವಕೀಲ ಅಮೃತೇಶ್ ದೂರು ನೀಡಿದ್ದಾರೆ. ಗಾಂಧಿ ಭವನ ಕಾರ್ಯದರ್ಶಿಗೆ ದೂರು ನೀಡಿರುವ ಅಮೃತೇಶ್, ನಿಯಮ ಬಾಹಿರವಾಗಿ ನಡೆದುಕೊಂಡಿರುವ ಗಾಂಧಿ ಭವನ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕೆಂದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Edited By

Shruthi G

Reported By

Madhu shree

Comments