ಬಿಜೆಪಿಯ ಪರಿವರ್ತನಾ ಯಾತ್ರೆ ಬಗ್ಗೆ ದೇವೇಗೌಡರು ಹೇಳುವುದೇನು?
ಬಿಜೆಪಿಯ ಪರಿವರ್ತನಾ ಯಾತ್ರೆ ಕುರಿತು ದೇವೇಗೌಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ‘ಜಗತ್ತಿನಲ್ಲಿ ಏನೇನೊ ನಡೆಯತ್ತೆ. ಅದರಲ್ಲಿ ಒಳ್ಳೆಯದು ಇರುತ್ತೆ, ಕೆಟ್ಟದ್ದೂ ಇರತ್ತೆ. ಸೃಷ್ಟಿಕರ್ತನೇ ಒಳ್ಳೆಯದು, ಕೆಟ್ಟದ್ದನ್ನು ಮಾಡಿದ್ದಾನೆ. ಸುಖ-ದುಖಃ ಎಲ್ಲವನ್ನು ಅವನೇ ತೀರ್ಮಾನ ಮಾಡುತ್ತೇನೆ' ಎಂದರು.
ಕರ್ನಾಟಕ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಅಂಗವಾಗಿ ಶುಕ್ರವಾರ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜಗ್ಗೇಶ್ ದೇವೇಗೌಡರ ಮಾತಿನ ಶೈಲಿಯನ್ನು ಮಿಮಿಕ್ರಿ ಮಾಡಿದ್ದರು. ಶುಕ್ರವಾರ ಸಂಜೆ ನೆಲಮಂಗಲದಲ್ಲಿ ಮಾಧ್ಯಮಗಳು ಜಗ್ಗೇಶ್ ಮಿಮಿಕ್ರಿ ಮಾಡಿದ ಬಗ್ಗೆ ಪ್ರಶ್ನಿಸಿದಾಗ ದೇವೇಗೌಡರು, 'ಜಗ್ಗೇಶ್ ದೊಡ್ಡವರು ಜೊತೆಗೆ ಚಿತ್ರ ನಟರು. ಅವರ ಬಗ್ಗೆ ನಾನು ಮಾತನಾಡಲು ಸಾಧ್ಯನಾ?' ಎಂದು ಕೇಳಿದರು. ಬಿಜೆಪಿ 2018ರ ಚುನಾವಣಾ ಪ್ರಚಾರಕ್ಕಾಗಿ ಆರಂಭಿಸಿರುವ ನವ ಕರ್ನಾಟಕ ಪರಿವರ್ತನಾ ಯಾತ್ರೆ ಶುಕ್ರವಾರ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಂಚಾರ ನಡೆಸಿದೆ. ಇಂದು ತುಮಕೂರು ನಗರದಲ್ಲಿ ಯಾತ್ರೆಯ ಸಮಾವೇಶ ನಡೆಯಲಿದೆ.
Comments