ಬಿಹಾರದಲ್ಲಿ 'ಡರ್ಟಿ ಪಿಕ್ಚರ್' ರಾಜಕೀಯ..

ಬಿಹಾರ: ಬಿಹಾರದಲ್ಲಿ ಡರ್ಟಿ ಪಿಕ್ಚರ್ ರಾಜಕೀಯ ಶುರುವಾಗಿದೆ. ಆರ್ ಜೆಡಿ- ಜೆಡಿಯು ಮಧ್ಯೆ ಮಧ್ಯೆ ಜಗಳ ಶುರುವಾಗಿದ್ದು, ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.
ಬಿಹಾರ: ಬಿಹಾರದಲ್ಲಿ ಡರ್ಟಿ ಪಿಕ್ಚರ್ ರಾಜಕೀಯ ಶುರುವಾಗಿದೆ. ಆರ್ ಜೆಡಿ- ಜೆಡಿಯು ಮಧ್ಯೆ ಮಧ್ಯೆ ಜಗಳ ಶುರುವಾಗಿದ್ದು, ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಸುದ್ದಿಗೋಷ್ಟಿಯಲ್ಲಿ ಜೆಡಿಯು ಮುಖಂಡರುಗಳಾದ ಸಂಜಯ್ ಸಿಂಗ್, ನೀರಜ್ ಕುಮಾರ್ ಹಾಗೂ ನಿಖಿಲ್ ಮಂಡಲ್ ಸುದ್ದಿಗೋಷ್ಟಿ ನಡೆಸಿದ್ದಾರೆ. ನಾವು ನಮ್ಮ ಮನೆಗಳನ್ನು ತಪಾಸಣೆ ಮಾಡಲು ಲಾಲೂ ಅವರಿಗೆ ಅವಕಾಶ ನೀಡ್ತೇವೆ, ಆದ್ರೆ ಲಾಲು ತಮ್ಮ ಮನೆಯನ್ನು ನಮಗೆ ತಪಾಸಣೆ ಮಾಡಲು ಅವಕಾಶ ನೀಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ವಿಧಾನಸಭಾ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಬಿಹಾರದಲ್ಲಿ ಮದ್ಯ ಮಾಫಿಾಯಾಗಕ್ಕೆ ಪ್ರೋತ್ಸಾಹ ನೀಡುತ್ತಿದ್ದು ಆರೋಪ ಮಾಡಿದ್ದಾರೆ. ಅದಲ್ಲದೇ ತೇಜಸ್ವಿ ಯಾದವ್ ಅಪರಿಚಿತ ಯುವತಿಯ ಜತೆಗೆ ತಬ್ಬಿಕೊಂಡಿರುವ ಫೋಟೋ ಕೂಡ ಬಿಡುಗಡೆ ಮಾಡಿದ್ದಾರೆ. ದೆಹಲಿಗೆ ಹೋದಾಗ ತೇಜಸ್ವಿ ಯಾದವ್ ಬಿಹಾರ ಭವನದಲ್ಲಿ ಉಳಿಯದೇ ಮದ್ಯ ಸೇವನೆ ಕಾರಣಗಳಿಂದ ವಸತಿ ಗೃಹಗಳಲ್ಲಿ ಉಳಿಯುತ್ತಾರೆ ಎಂದು ತಿಳಿಸಿದ್ದಾರೆ.
Comments