ಖಾಲಿ ಕುರ್ಚಿ ನೋಡಿ ಅಮಿತ್ ಶಾ ಗರಂ
ಕಾರ್ಯಕ್ರಮ ಆಯೋಜಕರು ಸುಮಾರು 1ಲಕ್ಷ ಕುರ್ಚಿ ಹಾಕಿದ್ದರು. ಕುರ್ಚಿ ಖಾಲಿಯಿರುವುದನ್ನು ಕಂಡ ಅಮಿತ್ ಶಾ ವೇದಿಕೆ ಮೇಲೆಯೇ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಪರಿವರ್ತನಾ ರ್ಯಾಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಾವಿರಾರು ಖಾಲಿ ಕುರ್ಚಿಗಳನ್ನು ನೋಡಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಕಾರ್ಯಕ್ರಮ ಆಯೋಜಕರು ಸುಮಾರು 1ಲಕ್ಷ ಕುರ್ಚಿ ಹಾಕಿದ್ದರು. ಕುರ್ಚಿ ಖಾಲಿಯಿರುವುದನ್ನು ಕಂಡ ಅಮಿತ್ ಶಾ ವೇದಿಕೆ ಮೇಲೆಯೇ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರು, ಎಂ ಎಲ್ ಸಿಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು ದೂರದಲ್ಲಿ ನಿಂತಿದ್ದ ಜನರನ್ನು ವೇದಿಕೆ ಮುಂಭಾಗಕ್ಕೆ ಕರೆತರಲು ಪ್ರಯತ್ನಿಸಿದ್ದರು. ಹಲವು ಮಂದಿ ಬಿಸಿಲ ಝಳ ತಾಳದೇ ಮರದಡಿ ಆಶ್ರಯ ಪಡೆದಿದ್ದರು, ಮತ್ತಷ್ಟು ಮಂದಿ ಬೈಕ್ ಪಾರ್ಕಿಂಗ್ ಸ್ಥಳ ಹಾಗೂ ಊಟದ ಕೌಂಟರ್ ಬಳಿ ನಿಂತಿದ್ದರು. ಹೀಗಾಗಿ ಕುರ್ಚಿಗಳು ಬಣಗುಡುತ್ತಿದ್ದವು. ಈ ಸಂಬಂಧ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ಪರಿವರ್ತನಾ ಯಾತ್ರೆಗೆ ಬರುತ್ತಿದ್ದ ಜನರನ್ನು ತಡೆದು ವಾಪಸ್ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಡಳಿತ ಬಿಜೆಪಿ ಕಾರ್ಯಕರ್ತರು ಪರಿವರ್ತನಾ ಯಾತ್ರೆಗೆ ಬರುವುದನ್ನು ತಡೆಗಟ್ಟಿದೆ ಎಂದು ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮತ್ತು ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.
Comments