ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ : ಡಿಕೆಶಿ
ರಾಜ್ಯದಲ್ಲಿ ಹಿಂದೆ ಜನತೆಯಿಂದ ಭ್ರಷ್ಟ ಸರ್ಕಾರ ಎಂದು ಗುರುತಿಸಿಕೊಂಡಿರುವ ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಮತ್ತೂಮ್ಮೆ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯದಲ್ಲಿ 2018ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು
ನ.22ರಂದು ಯೋಗೇಶ್ವರ್ ಕರೆದಿದ್ದ ಪ್ರಗತಿಪರ ಚಿಂತಕರ ಸಭೆಯ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಯೋಗಿ ಬಣದಲ್ಲಿ ಗುರುತಿಸಿಕೊಂಡಿದ್ದ ಆರ್.ಎಂ. ಮಲವೇಗೌಡ ಅವರನ್ನು ಕಾಂಗ್ರೆಸ್ ಪಕ್ಷದಲ್ಲೇ ಉಳಿದುಕೊಳ್ಳುವಂತೆ ಹಾಗೂ ತಾಲೂಕು ಗಾಮೀಣ ಭಾಗದ ಉಸ್ತುವಾರಿ ವಹಿಸಿಕೊಳ್ಳುವಂತೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಇದಕ್ಕೆ ಉತ್ತರಿಸಿದ ಮಲವೇಗೌಡ ನಾನು ಕಾಂಗ್ರೆಸ್‌ನಲ್ಲೇ ಇದ್ದೇನೆ ಎರಡು ದಿನಗಳಲ್ಲಿ ತೀರ್ಮಾನ ಹೇಳುತ್ತೇನೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.
ಮುದ್ದುಕೃಷ್ಣಗೆ ನಗರ ಉಸ್ತವಾರಿ: ನಗರಸಭೆ ಸದಸ್ಯ ಮುದ್ದುಕೃಷ್ಣ ಅವರ ಮನೆಗೆ ಭೇಟಿ ನೀಡಿದ ಶಿವಕುಮಾರ್, ನಗರ ಪ್ರದೇಶದ ಉಸ್ತುವಾರಿ ವಹಿಸಿ ಕೊಳ್ಳುವಂತೆ ಹೇಳಿದರು. ಇದಕ್ಕೆ ಉತ್ತರಿಸಿದ ಮದ್ದುಕೃಷ್ಣ, ಯೋಗೇಶ್ವರ್ ಬಿಜೆಪಿ ಸೇರಿದ ಬಳಿಕ ನಮಗೂ ಅವರಿಗೂ ಸಂಪರ್ಕ ಇಲ್ಲ. ನಾನು ಕಾಂಗ್ರೆಸ್‌ನಲ್ಲೇ ಇದ್ದೇನೆ ಎಂದು ತಿಳಿಸಿದರು.
ನಾನು ನಿಮ್ಮ ಜೊತೆಗಿದ್ದೇನೆ: ಬಿಜೆಪಿಯಲ್ಲಿ ಗುರುತಿಸಿಕೊಂಡವರು ಕಾಂಗ್ರೆಸ್ ಪಕ್ಷಕ್ಕೆ ಬಂದು ಬಿಡಿ, ನಾನು ನಿಮ್ಮ ಜತೆಗೆ ಇರುತ್ತೇನೆ ಯಾರು ವಿಚಲಿತರಾಗಬೇಡಿ, ನಿಮ್ಮ ಕೆಲಸ ಕಾರ್ಯಗಳಾಗಲಿ, ತಾಲೂಕಿನ ಅಭಿವೃದ್ಧಿಯಾಗಲಿ. ನಾನು ನೋಡಿಕೊಳ್ಳುತ್ತೇನೆ. ಜೊತೆಗೆ ವಾರಕ್ಕೊಮ್ಮೆ ಸಂಸದ ಡಿ.ಕೆ.ಸುರೇಶ್ ಹಾಗೂ ನಾನು ಈ ಕ್ಷೇತ್ರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಂದೇಶ ನೀಡಿದರು.
Comments