ಜಮೀರ್ ವಿವಾದಾತ್ಮಕ ಹೇಳಿಕೆಗೆ ಶರವಣ ತಿರುಗೇಟು
ಯಾರ ಅತ್ತಿರ ಹೋಗಿ ಬಕೆಟ್ ಹಿಡ್ಕೊಂಡ್ರು ಅಂತ ಜಮೀರ್ ನನ್ನೇ ಕೇಳ್ಬೇಕು ಅಂತ ಪ್ರತಿ ಉತ್ತರ ಕೊಟ್ಟ ಶರವಣ ರವರು ಕೊಟ್ಟರು . ದೇವೇಗೌಡರು ಸತ್ತ ನಂತರ ಅವರ ತಿಥಿ ಮಾಡುವಷ್ಟರೊಳಗೆ ರೇವಣ್ಣ ನವರೇ ನನ್ನ ಬಳಿ ಬಂದು ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತಾರೆ , ಅಲ್ಲದೆ ದೇವೇಗೌಡರು ಇರುವ ವರೆಗೆ ಮಾತ್ರ ಜೆಡಿಎಸ್ ಪಕ್ಷ ಏರುತದ್ದೇ ಎಂದು ಹೇಳಿಕೆ ನೀಡಿದ್ದ ಜಮೀರ್ ರಾಜ್ಯದ ಜನತೆಯ ಮುಂದೆ ಕ್ಷೆಮೆಯಾಚಿಸಬೇಕು ಎಂದು ಶರವಣ ಹೇಳಿದರು.
ಜಮೀರ್ ತಮ್ಮ ಚುನಾವಣಾ ಪ್ರಚಾರಕ್ಕಾಗಿ ಜೆಡಿಎಸ್ ಕಾರ್ಯಕರ್ತರ ಹೆಸರು ಬಳಸುತ್ತಿದ್ದಾರೆ. ಬಕೆಟ್ ಹಿಡ್ಕೊಂಡು ಹೋಗುತ್ತಿದ್ದರೆ ಎಂದು ಜಮೀರ್ ನೇರವಾಗಿ ಹೇಳದೆ ಪ್ರಜ್ವಲ್ ರೇವಣ್ಣ ನವರ ಹೆಸರು ಬಳಸಿಕೊಂಡು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಪಕ್ಷ ನಿಮ್ಮನು ದೂರ ಹಿಟ್ಟಿದೆ ಮತ್ತೆ ಮತ್ತೆ ಜೆಡಿಎಸ್ ಮುಖಂಡರ ಹೆಸರು ಯಾಕೆ ಬಳಸುತ್ತಿದ್ದಾರೆ ಎಂದು ಶರವಣ ಪ್ರಶ್ನಿಸಿದರು. ನಿಮ್ಮಂತ ಕೀಳು ಮಟ್ಟದ ರಾಜಕಾರಣ ಬೇಡ ನಮಗೆ. ಮುಸ್ಲಿಂ ಸಮುದಾಯದ ಬಗ್ಗೆ ಜೆಡಿಎಸ್ ನಲ್ಲಿ ಅಪಾರ ಅಭಿಮಾನವಿದೆ. ಆದರೆ ಜಮೀರ್ ಅಹಮ್ಮದ್ ದ್ವೇಷಿಯಾಗಿದ್ದರೆ. ಚುನಾವಣೆಯ ಭಯದಿಂದ ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡುವುದು ಅನುಮಾನವಿದೆ . ಅದಕ್ಕಾಗಿ ಹತಾಶ ಮನೋಭಾವದಿಂದ ಜಮೀರ್ ರವರು ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಶರವಣ ವಾಗ್ದಾಳಿ ನಡೆಸಿದರು.
Comments