ಭ್ರಷ್ಟಾಚಾರಕ್ಕೆ ಪ್ರಚೋದಿಸಿದ್ದಾರೆಂದು ಉಪ್ಪಿ ವಿರುದ್ಧ ದೂರು ದಾಖಲು

02 Nov 2017 5:13 PM | Politics
239 Report

ಹೊಸ ಪಕ್ಷ ಘೋಷಣೆ ವೇಳೆ ಗಾಂಧಿ ಭವನದಲ್ಲಿ ಭಾಷಣ ಮಾಡಿದ ಉಪೇಂದ್ರ ಅವರು ತಮ್ಮ ಅಭಿಮಾನಿಗಳನ್ನು ಪ್ರಚೋದಿಸುವ ಭರದಲ್ಲಿ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಚುನಾವಣೆಯ ಸಂದರ್ಭದಲ್ಲಿ ಯಾರಾದರೂ ಅಭ್ಯರ್ಥಿಗಳು ಹಣ ನೀಡಿದರೆ ತೆಗೆದುಕೊಳ್ಳಿ, ಆದರೆ, ನಿಮಗೆ ಇಷ್ಟ ಬಂದವರಿಗೆ ಮಾತ್ರ ಮತ ಹಾಕಿ ಎಂದು ಉಪೇಂದ್ರ ಹೇಳಿದ್ದರು. ಮತದಾರರಿಗೆ ಪ್ರಚೋದನೆ ನೀಡುವ ಮೂಲಕ ಅವರಿಗೆ ಆಮಿಷ ಒಡ್ಡಿದ್ದಾರೆ, ಭ್ರಷ್ಟಾಚಾರಕ್ಕೆ ಪ್ರೇರಿಪಿಸಿದ್ದಾರೆ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಅಪಚಾರದ ಆರೋಪದಡಿ ಕ್ರಮ ಕೈಗೊಳ್ಳಬೇಕು ಎಂದು ಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್ ನಾಗೇಶ್ ಅವರು ಇಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Edited By

Hema Latha

Reported By

Madhu shree

Comments