ಯುವತಿಯ ಜೊತೆ ಸೆಲ್ಫಿಯಲ್ಲಿ ಮಿಂಚಿದ ರಾಹುಲ್

ಮದುವೆ ವಿಷಯ ಎತ್ತಿದ ಕೂಡಲೆ ಮಾರುದ್ದ ನೆಗೆಯುವ 47 ವರ್ಷದ ಬ್ರಹ್ಮಚಾರಿ ರಾಹುಲ್ ಮುಖ ಮತ್ತಷ್ಟು ಕೆಂಪೇರಿತ್ತು. ರಾಹುಲ್ ಜೊತೆ ಯುವತಿಯೊಬ್ಬಳು ಸೆಲ್ಫಿ ತೆಗೆದುಕೊಂಡಿದ್ದಾಳೆ. ಈ ಸೆಲ್ಫಿ ಹುಡುಗಿ ಹೆಸರು ಮಂತಶಾ ಸೇಠ್. ಈಕೆ ರಾಹುಲ್ ಗಾಂಧಿಯ ಬಹುದೊಡ್ಡ ಅಭಿಮಾನಿಯಂತೆ.
ಅನೇಕ ವರ್ಷಗಳಿಂದ ರಾಹುಲ್ ಗಾಂಧಿಯನ್ನು ಫಾಲೋ ಮಾಡ್ತಿರುವ ಈ ಹುಡುಗಿ ಮಾಧ್ಯಮವೊಂದಲ್ಲಿ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾಳೆ. ರಾಹುಲ್ ಗಾಂಧಿಯವರನ್ನು ಟಿವಿಯಲ್ಲಿ ನೋಡ್ತಿದ್ದೆ. ಅವರು ಮಾಡುವ ಭಾಷಣ ಹಾಗೂ ಅವರ ಕೆಲಸ, ವ್ಯಕ್ತಿತ್ವ ನನಗೆ ಇಷ್ಟವಾಗಿದೆ. ಹಾಗಾಗಿ ಅವರನ್ನು ತುಂಬಾ ವರ್ಷಗಳಿಂದ ಫಾಲೋ ಮಾಡ್ತಿದ್ದೇನೆ. ಅವರ ಜೊತೆ ಮಾತನಾಡಲು ಬಯಸಿದ್ದೆ. ಇದು ಈಡೇರಿದೆ ಎಂದು ಮಂತಶಾ ಹೇಳಿದ್ದಾಳೆ. ರಾಹುಲ್ ರ್ಯಾಲಿ ವೇಳೆ ಆತ್ಮವಿಶ್ವಾಸದಿಂದ ರಾಹುಲ್ ಗಾಡಿ ಬಳಿ ಬಂದ ಮಂತಶಾ ಹಣ್ಣನ್ನು ಗಿಫ್ಟ್ ಆಗಿ ನೀಡಿದ್ದಾಳೆ. ನಂತ್ರ ರಾಹುಲ್ ಗಾಂಧಿ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾಳೆ. ರಾಹುಲ್ ಗಾಂಧಿಗೆ ಯಶಸ್ಸು ಸಿಗಲಿ, ಗುಜರಾತ್ ಚುನಾವಣೆಯಲ್ಲಿ ಗೆಲುವು ಅವರದಾಗಲಿ ಎಂಬುದು ಈ ಹುಡುಗಿ ಆಸೆಯಂತೆ.
Comments