ಅಮಿತ್ ಶಾ , ಮುಖ್ತರ್ ನಖ್ವಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲು

ನವದೆಹಲಿ, ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಕೇಂದ್ರ ಮಂತ್ರಿ ಮುಖ್ತರ್ ನಖ್ವಿ ವಿರುದ್ಧ ಉತ್ತರಪ್ರದೇಶದ ರಾಜಧಾನಿ ಲಖನೌ ನಲ್ಲಿ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಲಾಗಿದೆ.
ಅಮಿತ್ ಶಾ , ಮುಖ್ತರ್ ನಖ್ವಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲು
ನವದೆಹಲಿ, ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಕೇಂದ್ರ ಮಂತ್ರಿ ಮುಖ್ತರ್ ನಖ್ವಿ ವಿರುದ್ಧ ಉತ್ತರಪ್ರದೇಶದ ರಾಜಧಾನಿ ಲಖನೌ ನಲ್ಲಿ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಲಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ನವೆಂಬರ್ 4ರಂದು ವಿಚಾರಣೆ ನಡೆಯಲಿದೆ.
ಹಿಮಾಚಲ ಪ್ರದೇಶದ ರ್ಯಾಲಿ ವೊಂದರಲ್ಲಿ ಈ ರೀತಿಯಾಗಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲಾಗಿತ್ತು. 'ಕಾಂಗ್ರೆಸ್ ಕಾ ಹಾಥ್ , ಆತಂಕವಾದ್ ಕೇ ಸಾಥ್'ಎಂದು ಅಮಿತ್ ಷಾ , ನಖ್ವಿ ಹೇಳಿದ್ದರು. ಆದಕಾರಣ ಇವತ್ತು ಇವರಿಬ್ಬರ ಮೇಲೆ ಕೇಸ್ ದಾಖಲು ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಐಎಎನ್ ಎಸ್ ವರದಿ ಪ್ರಕಾರ, ಕಾಂಗ್ರೆಸ್ ಕಾರ್ಯಕರ್ತರಾಗಿರು ಗಂಗಾ ಸಿಂಹ ಎಂಬಾತರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಯಲ್ಲಿ ಅವರು ಈ ರೀತಿ ಆಗಿ ಹೇಳಿಕೆ ನೀಡಿದ್ದರು. ಖಾಸಗಿ ಪತ್ರಿಕೆಯೊಂದರಲ್ಲಿ ವರದಿಯಲ್ಲಿ ಈ ಹೇಳಿಕೆ ಬಗ್ಗೆ ಬರೆಯಲಾಗಿತ್ತು. ಇದನ್ನು ನೋಡಿದ ಅವರು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.ಕಾಂಗ್ರೆಸ್ ಪಕ್ಷವನ್ನು ಭಯೋತ್ಪಾದನೆಗೆ ಹೋಲಿಕೆ ಮಾಡಿರುವುದು ಅಪಾರ ಅಭಿಮಾನಿಗಳಲ್ಲಿ ಹಾಗೂ ನಾಯಕರಿಗೆ ಘಾಸಿ ಉಂಟು ಮಾಡಿದೆ. ಅವರ ಭಾವನೆಗಳಿಗೆ ನೋವು ಉಂಟಾಗಿದೆ. ಇದರಿಂದ ಕಾಂಗ್ರೆಸ್ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
Comments