ದೇವೇಗೌಡರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲಿ ಹಿಡಿತವಿರಲಿ : ಮಂಚೇಗೌಡ ವಾಗ್ದಾಳಿ
ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಮಾತ್ರವೇ ಮಣ್ಣಿನ ಮಕ್ಕಳೇ ಎಂದು ಕಾಂಗ್ರೆಸ್ ಕಾರ್ಯಕ್ರಮದ ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ.ಮಾದೇಗೌಡ ಟೀಕಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಯಾರನ್ನಾದರೂ ಟೀಕಿಸುವಾಗ ತಮ್ಮ ಘನತೆ ಏನು, ಅವರ ಘನತೆ ಏನು ಎಂಬ ಅರಿವಿಟ್ಟುಕೊಂಡು ಮಾತನಾಡಬೇಕು. ಇಲ್ಲದಿದ್ದರೆ ಅದು ಹಾಸ್ಯಾಸ್ಪದವಾಗುತ್ತದೆ. ಇದಕ್ಕೆ ಮಧು ಅವರ ಹೇಳಿಕೆಯೇ ನಿದರ್ಶನ ಎಂದರು. ದೇವೇಗೌಡರ ರೈತ ಪರವಾದ ಹೋರಾಟ, ಅವರ ಕೊಡುಗೆಗಳು ಇಡೀ ದೇಶದ ಜನರಿಗೆ ಗೊತ್ತಿದೆ. ಮಣ್ಣಿನ ಮಗ ಎನ್ನುವುದು ರಾಜ್ಯದ ಜನರು ದೇವೇಗೌಡರಿಗೆ ಇಟ್ಟ ಪ್ರೀತಿಯ ಹೆಸರೇ ವಿನಃ ದೇವೇಗೌಡರೇ ಇಟ್ಟುಕೊಂಡ ಹೆಸರಲ್ಲ ಎಂಬ ಸಾಮಾನ್ಯ ಜ್ಞಾನ ಕೂಡ ಮಧು ಅವರಿಗೆ ತಿಳಿದಿಲ್ಲ ಎಂದು ದೂಷಿಸಿದರು.
ದೊಡ್ಡವರನ್ನು ಟೀಕಿಸಿದ ಮಾತ್ರಕ್ಕೆ ತಾವು ದೊಡ್ಡರಾಗುವುದಿಲ್ಲ. ಜನಪರ ಕಾಳಜಿ ಇದ್ದ ಕಾರಣದಿಂದ ದೇವೇಗೌಡರು ದೇಶದ ಪ್ರಧಾನಿಯಾದರು, ರಾಜ್ಯದ ಮುಖ್ಯಮಂತ್ರಿಯಾದರು. ಜನರ ನಾಯಕನಾಗಿ ಆಡಳಿತ ನಡೆಸಿದರು. ಮಧು ಅವರನ್ನು ಕ್ಷೇತ್ರದ ಜನರೇ ತಮ್ಮ ನಾಯಕ ಎಂದು ಒಪ್ಪಿಲ್ಲ. ಇಂತಹವರು ದೇವೇಗೌಡರನ್ನು ಟೀಕಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಇನ್ನು ಮುಂದೆ ದೇವೇಗೌಡರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲಿ ಹಿಡಿತವಿರಲಿ. ಮಾತನ್ನು ಹರಿತಗೊಳಿಸಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ದೊಡ್ಡರಸಿನಕೆರೆ ಡಿ.ಸಿ.ಶಿವರಾಮು, ರಾಮಕೃಷ್ಣ, ಸಿ.ಎಂ.ಮಾಯೀಗೌಡ, ಡಿ.ಹೆಚ್.ಮಹೇಶ್, ಡಿ.ಸಿ.ಕಿರಣ್‌ಕುಮಾರ್, ಡಿ.ಕೆ.ಆನಂದ್, ಗುರುದೇವರಹಳ್ಳಿ ಜಿ.ಪಿ.ಸಂತೋಷ್, ಜಿ.ಎಂ.ಕಾರ್ತೀಕ್ ಎಚ್ಚರಿಸಿದ್ದಾರೆ.
Comments