ನವೆಂಬರ್ 1ರಂದು ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಹೊಸ ಪಕ್ಷ ಘೋಷಣೆ

ಬಳ್ಳಾರಿ: ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಅವರು ಹೊಸ ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದು, ಇದೇ ನವೆಂಬರ್ 1ರಂದು ಜಿಲ್ಲೆಯ ಕೂಡ್ಲಗಿ ಪಟ್ಟಣದಲ್ಲಿ ಮೊದಲ ಸಭೆ ಕರೆದು ಹೆಸರು ಘೋಷಣೆ ಮಾಡಲಾಗುತ್ತದೆ.
ಈ ಕುರಿತು ಸುದ್ದಿಗೋಷ್ಠಿ ಕರೆದಿದ್ದ ಅನುಪಮಾ ಶೆಣೈ ' ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ 224 ಕ್ಷೇತ್ರಗಳ ಪೈಕಿ 80 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ, ಆದರೆ ಕ್ಷೇತ್ರ ನಿಗದಿಯಾಗಿಲ್ಲ' ಎಂದು ಹೇಳಿದ್ದಾರೆ. ಇದೇ ವೇಳೆ ತನಗೆ ಪ್ರಾಣಭೀತಿಯಿರುವುದಾಗಿ ಹೇಳಿದ್ದ ಶೇಣೈ ಈ ವಿಚಾರವಾಗಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ. ' ರಾಜ್ಯದಲ್ಲಿ ಭ್ರಷ್ಟಾಚಾರ, ದುಷ್ಟಾಚಾರ ಎರಡೂ ಇದೆ. ನಾನೊಬ್ಬಳೇ ಹೊಸ ಪಕ್ಷ ಮಾಡುತ್ತಿಲ್ಲ, ನನ್ನ ಹಿಂದೆ ಬಹಳಷ್ಟು ಜನರಿದ್ದಾರೆ' ಎಂದು ಶೇಣೈ ಹೇಳಿದ್ದಾರೆ.
Comments