ಕರುಣಾನಿಧಿ ನೇತೃತ್ವದ ಡಿಎಂಕೆ (ಪಕ್ಷ) ಅತಿ ಶ್ರೀಮಂತ ಪಕ್ಷ



ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ ನಡೆಸಿದ ಅಧ್ಯಯನದ ಪ್ರಕಾರ ದೇಶದ ರಾಜಕರಾಣದಲ್ಲೇ ಪ್ರಾಬಲ್ಯ ಬೀರಿದ ಪ್ರಾದೇಶಿಕ ಪಕ್ಷ ಡಿಎಂಕೆ ಯು ದೇಶದ ಅತಿ ದೊಡ್ಡ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ.
ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ ನಡೆಸಿದ ಅಧ್ಯಯನದ ಪ್ರಕಾರ ದೇಶದ ರಾಜಕರಾಣದಲ್ಲೇ ಪ್ರಾಬಲ್ಯ ಬೀರಿದ ಪ್ರಾದೇಶಿಕ ಪಕ್ಷ ಡಿಎಂಕೆ ಯು ದೇಶದ ಅತಿ ದೊಡ್ಡ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ ಮೊದಲನೇಯ ಸ್ಥಾನದಲ್ಲಿದ್ದರೆ, ಎಐಡಿಎಂಕೆ ರಾಜಕೀಯವಾಗಿ ಪ್ರತಿ ಸ್ಪರ್ಧಿ ಪಕ್ಷವಾಗಿ ಹಾಗೂ ಎರಡನೇಯ ಸ್ಥಾನದಲ್ಲಿದೆ.
ಒಟ್ಟು ಚುನಾವಣಾ ಆಯೋಗದಲ್ಲಿ 32 ಪ್ರಾದೇಶಿಕ ಪಕ್ಷಗಳು ನೋಂದಾವಣಿಯಾಗಿವೆ. 2017-16ನೇ ಸಾಲಿನ ಆದಾಯ ಮತ್ತು ಖರ್ಚು ಆಧರಿಸಿ ಈ ವರದಿ ಸಿದ್ಧಪಡಿಸಿದೆ. ವರದಿಯ ಪ್ರಕಾರ ಡಿಎಂಕೆ ಆದಾಯ 77.63 ಕೋಟಿ ರೂ. ಎಐಡಿಎಂಕೆ ಆದಾಯ 54.938 ಕೋಟಿ ರೂ ಇನ್ನು ಕರ್ನಾಟಕದ ಜೆಡಿಎಸ್ ಸಹಿತ 26 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ 47.92 ಕೋಟಿ ರೂ ಆಗಿದೆ.
Comments